ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೂ ಸಿಹಿ ತಿಂಡಿಯನ್ನು ಮಾಡಲು ನೀವು ಬಯಸಿದರೆ ಅಥವಾ ನಿಮಗೇ ತಕ್ಷಣವೇ ಏನಾದರೂ ಸಿಹಿ ತಿಂಡಿಯನ್ನು ತಿನ್ನಬೇಕು ಎನಿಸಿದರೆ ಈ ದಿಢೀರ್ ಹಲ್ವಾವನ್ನು ಮಾಡಬಹುದಾಗಿದೆ. ಹಾಲುಸೋರೆಕಾಯಿ ಒಂದು ಲಭ್ಯವಿದ್ದರೆ ಉಳಿದ ಪದಾರ್ಥಗಳೆಲ್ಲಾ ಸಾಮಾನ್ಯವಾಗಿ ಮನೆಯಲ್ಲಿರುವಂತಹುದೇ ಆಗಿದೆ. ಅತಿ ಶೀಘ್ರವಾಗಿ ಮತ್ತು ಕಡಿಮೆ ಸಾಮಗ್ರಿಗಳಲ್ಲಿ ನೀವು ಈ ರುಚಿಯಾದ ಹಲ್ವಾವನ್ನು ಮಾಡಿಕೊಳ್ಳಬಹುದು. ನಿಮಗೆ ಇಷ್ಟವಾಗುವ ಡ್ರೈ ಫ್ರೂಟ್ಸ್ಗಳನ್ನು ಇದರಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಈ ಹಾಲುಸೋರೆಕಾಯಿ ಹಲ್ವಾ ಮಾಡುವುದು