ಬೆಂಗಳೂರು: ಮೊಳಕೆ ಬರಿಸಿದ ಹೆಸರುಕಾಳು ದೇಹಕ್ಕೆ ತಂಪು, ಪೌಷ್ಠಿಕಾಂಶಗಳ ಖನಿಜ ಮತ್ತು ನಾರಿನಂಶದಿಂದ ಸಮೃದ್ಧವಾಗಿರುತ್ತದೆ. ಇದನ್ನು ಹಸಿಯಾಗಿ ತಿನ್ನುವುದಕ್ಕಿಂತ ಬದಲು ಹಬೆಯಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿ ಬಳಸಿದರೆ ವಾಯುಪ್ರಕೋಪವನ್ನು ತಡೆಯಬಹುದು. ಹಾಗಾಗಿ ಉಸುಲಿ ಅಥವಾ ಒಗ್ಗರಣೆ ರೂಪದಲ್ಲಿ ಸೇವಿಸಬಹುದು. ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪಿನೊಂದಿಗೆ ಮೊಳಕೆ ಕಟ್ಟಿದ ಹೆಸರುಕಾಳುಗಳನ್ನು ಬೇಯಿಸಿಕೊಳ್ಳಿ. ನಂತರ ಬಾಣಲೆಗೆ ಸಾಸಿವೆ, ಕರಿಬೇವು ಸೊಪ್ಪು, ಚಿಟಿಕೆ ಇಂಗು, 2 ಬ್ಯಾಡಗಿ ಮೆಣಸಿನ ಕಾಯಿ, ಅರಸಿನ ಹಾಕಿ