ಹಾಲಿವುಡ್ ನಟ ವಿಲ್ ಸ್ಮಿತ್ ಭಾರತದ ಪ್ರವಾಸದಲ್ಲಿದ್ದು ನಿನ್ನೆ ಬುಧವಾರ, ಅಕ್ಟೋಬರ್ 10 ರಂದು ಆಗ್ರಾದಲ್ಲಿರುವ ತಾಜ್ ಮಹಲ್ಗೆ ಭೇಟಿ ನೀಡಿದ್ದಾರೆ. ಜಗತ್ತಿನ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಸಹ ಒಂದಾಗಿದೆ. ಪ್ರೀತಿಯ ಸ್ಮಾರಕವಾದ ತಾಜ್ ಮಹಲ್ ಮುಂದೆ ಹಲವಾರು ಫೋಟೋಗಳನ್ನು ತೆಗೆದುಕೊಂಡಿರುವ ಸ್ಮಿತ್ ವಿವಿಧ ಭಾವ-ಭಂಗಿಗಳಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ.