ಕಾಶಿಯಿಂದ ಬಂದದ್ದಲ್ಲ ಬರೀ ಕಾಶಿ ಹಲ್ವಾ

Bangalore| Krishnaveni K| Last Modified ಮಂಗಳವಾರ, 31 ಜನವರಿ 2017 (09:33 IST)
ಬೆಂಗಳೂರು: ಹಲ್ವಾ ಮಾಡಲು ಸಾಕಷ್ಟು ವಿಧಾನಗಳಿವೆ. ಬೂದುಗುಂಬಳ ಬಳಸಿ ಮಜ್ಜಿಗೆ ಹುಳಿ, ಪಲ್ಯ ಏನೇನೋ ಮಾಡಬಹುದು. ಅದೇ ರೀತಿ ಇದರಿಂದ ಮಾಡುವ ಹಲ್ವಾ ಕೂಡಾ ಬಾಯಲ್ಲಿ ನೀರೂರುವಂತೆ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳುಬೂದು ಕುಂಬಳ ಕಾಯಿ
ತುಪ್ಪ
ಸಕ್ಕರೆ
ಏಲಕ್ಕಿ
ಗೋಡಂಬಿ
ದ್ರಾಕ್ಷಿಮಾಡುವ ವಿಧಾನಬೂದು ಕುಂಬಳ ಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡು ಹಬೆಯಲ್ಲಿ ಬೇಯಿಸಿ. ಬೇಯಿಸುವಾಗ ನೀರು ಹಾಕುವುದು ಬೇಡ. ಬೆಂದ ಮೇಲೆ ಇದನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದು ನೀರು ನೀರಾಗಿರುತ್ತದೆ. ಇದಕ್ಕೆ ಸಕ್ಕರೆ ಹಾಕಿಕೊಂಡು ಚೆನ್ನಾಗಿ ತಿರುವಿಕೊಳ್ಳಿ. ನಂತರ ಸ್ವಲ್ಪ ತುಪ್ಪ ಹಾಕಿ ಮತ್ತಷ್ಟು ತಿರುವಿ. ತಳ ಬಿಟ್ಟು ಬರುವಾಗ ಸಾಕಷ್ಟು ತುಪ್ಪ, ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ ಹಾಕಿ ಚೆನ್ನಾಗಿ ತಿರುವಿಕೊಂಡು ತುಪ್ಪ ಸವರಿದ ಬಟ್ಟಲಿಗೆ ಸುರುವಿಕೊಂಡು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :