ರುಚಿಯಾದ ಅಪ್ಪಿ ಪಾಯಸ ಮಾಡುವುದು ಹೇಗೆಂದು ಗೊತ್ತಾ….?

ಬೆಂಗಳೂರು, ಗುರುವಾರ, 7 ಜೂನ್ 2018 (15:59 IST)

ಬೆಂಗಳೂರು:  ಅಪ್ಪಿ ತಿನ್ನಲು ಬಲು ರುಚಿಕರವಾಗಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಪಾಯಸವನ್ನು ಸುಲಭವಾಗಿ ತಯಾರಿಸಬಹುದು.


ಸಾಮಗ್ರಿ: ಗೋಧಿ ಹಿಟ್ಟು 1 ಕಪ್‌, ಸಕ್ಕರೆ ಒಂದುವರೆ ಕಪ್‌, 2 , 3 ಸ್ಪೂನ್‌ ಹಾಲು 2ಕಪ್‌, ಗೋಡಂಬಿ , ದ್ರಾಕ್ಷಿ , ಕೇಸರಿ, ಏಲಕ್ಕಿ ಪುಡಿ ರುಚಿಗೆ. ಕರಿಯಲು ಎಣ್ಣೆ.


ವಿಧಾನ : ಗೋಧಿ ಹಿಟ್ಟಿಗೆ ತುಪ್ಪ ಹಾಕಿ ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ. ಪೂರಿ ಹಾಳೆ ಒತ್ತಿ ಗರಿಗರಿ ಪೂರಿಯನ್ನು ಕಾದ ಎಣ್ಣೆಯಲ್ಲಿ ಕರಿದಿಡಿ . ಪೂರಿ ಬಿಸಿ ಆರಿದ ಮೇಲೆ ಅದನ್ನು ಚಿಕ್ಕದಾಗಿ ಪುಡಿ ಮಾಡಿ. ಅದಕ್ಕೆ ತಕ್ಕಷ್ಟು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಹಾಲು ಮಿಕ್ಸ್‌ ಮಾಡಿ ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಕೈಅಡಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಸೇರಿಸಿ ಏಲಕ್ಕಿ ಪುಡಿ ಕೇಸರಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಬಿಸಿಬಿಸಿಯಾಗಿ ಕುಡಿದರೆ ತುಂಬ ರುಚಿ.      
    
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒತ್ತಡದ ಸಮಸ್ಯೆಗೆ ಬೈ ಹೇಳಿ..!!

ಈಗೀಗ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಒತ್ತಡದ ಸಮಸ್ಯೆಯೂ ಒಂದು. ಹೆಚ್ಚಿನ ಜನರಿಗೆ ತಮಗೆ ಇರುವ ...

news

ಸಕ್ಕರೆ ಕಾಯಿಲೆಯ ಸಮಸ್ಯೆಗಳನ್ನು ತಪ್ಪಿಸುವ ಮಾರ್ಗಗಳು...

ಇತ್ತೀಚೆಗೆ ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆಯು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಸುಮಾರು 40 ವರ್ಷ ...

news

ಅಂಜೂರ ಹಣ್ಣನ್ನು ಊಟಕ್ಕೂ ಮೊದಲು ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಅಂಜೂರ… ಈ ಹಣ್ಣಿನ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಇದನ್ನು ಹತ್ತಿಹಣ್ಣು ಎಂದು ಸಹ ...

news

ಯಾವ ಭಂಗಿಯಿಂದ ಸೆಕ್ಸ್ ಹೆಚ್ಚು ತೃಪ್ತಿದಾಯಕ?

ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸುವಾಗ ಹಲವು ಭಂಗಿಗಳಿದ್ದು ಎಲ್ಲರೂ ತಮಗೆ ಅನುಕೂಲಕರವಾದ ಭಂಗಿಯನ್ನು ಆಯ್ಕೆ ...