ಅಂಬಟೆ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಹುಳಿ ಮಿಶ್ರಿತ ಕಾಯಿ ಉಪ್ಪಿನಕಾಯಿ, ಸಾರು, ಗೊಜ್ಜು ಏನೇ ಮಾಡಿದರೂ ರುಚಿ. ಸ್ವಲ್ಪ ಉಷ್ಣ ಪ್ರಕೃತಿಯ ಕಾಯಿ ಇದು. ಹಾಗಾಗಿ ಹದವಾಗಿ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು. ಇದರ ಗೊಜ್ಜು ಮಾಡುವುದು ಹೇಗೆ ತಿಳಿದುಕೊಳ್ಳೋಣ.