ಬೆಂಗಳೂರು: ಸಾಕಷ್ಟು ಕಬ್ಬಿಣಾಂಶವಿರುವ ಸಪೋಟ ಹಣ್ಣಿನ ಸೇವನೆಯಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ಬಗೆಬಗೆಯ ತಿನಿಸುಗಳನ್ನು ಮಾಡಬಹುದು. ಸಪೋಟಾ ಕುಲ್ಫಿ ಮಾಡುವ ಬಗೆ ಇಲ್ಲಿದೆ ನೋಡಿ. ಸಪೋಟಾ ಕುಲ್ಫಿ ಬೇಕಾಗುವ ಸಾಮಗ್ರಿ: ಸಪೋಟಾ - ನಾಲ್ಕು, ಬಾಳೆಹಣ್ಣು- ಒಂದು, ಖರ್ಜೂರ - ಎರಡು, ಗೋಡಂಬಿ ತರಿ - ಎರಡು ಚಮಚ, ಹಾಲು - ಎರಡು ಕಪ್, ಸಕ್ಕರೆ ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ: ಮಿಕ್ಸಿಜಾರಿಗೆ ಸಪೋಟಾ, ಬಾಳೆಹಣ್ಣು, ಹಾಲು ಮತ್ತು ಸಕ್ಕರೆ