ಬೇಸಿಗೆಯ ಕಾಲ ಬಂತೆಂದರೆ ಆಯ್ಯೋ ಎಷ್ಚು ಉರಿಯಪ್ಪಾ, ಅಮ್ಮಾ ಸೆಖೆ ಎಂಬಂತಹ ಉದ್ಗಾರಗಳು ಸರ್ವೇ ಸಾಮಾನ್ಯ. ಬೇಸಿಗೆಯ ಕಾಲದಲ್ಲಿ ಬಾವಿ, ಕೆರೆಯ ನೀರುಗಳು ಬತ್ತುವುದಲ್ಲದೇ ಮಾನವನ ದೇಹದಲ್ಲಿಯೂ ನಿರ್ಜಲೀಕರಣ ಉಂಟಾಗುತ್ತದೆ. ಅಷ್ಟೇ ಅಲ್ಲದೇ ತ್ವಚೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪ್ರಾಣಿ-ಪಕ್ಷಿಗಳೂ ತತ್ತರಿಸುವಂತಹ ಈ ಬೇಸಿಗೆ ಕಾಲದಲ್ಲಿ ಎಂತಹ ಆಹಾರಗಳನ್ನು ನಾವು ಸೇವಿಸಬೇಕು ಎಂಬಂತಹ ಪ್ರಶ್ನೆ ಉದ್ಭವಿಸುವುದು ಸಹಜ. ಏಕೆಂದರೆ ಜೀರ್ಣಶಕ್ತಿಯೂ ಕಡಿಮೆಯಾಗಿರುತ್ತದೆ. ಎಂತಹ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ನೋಡೋಣ..