ಇನ್‌ಸ್ಟಂಟ್ ಬೆಣ್ಣೆ ಚಕ್ಕುಲಿ

ಬೆಂಗಳೂರು, ಗುರುವಾರ, 14 ಮಾರ್ಚ್ 2019 (15:43 IST)


ತಯಾರಿಸಲು ಬೇಕಾಗುವ ಸಾಮಗ್ರಿಗಳು:
 
* ಅಕ್ಕಿ ಹಿಟ್ಟು 1 ಕಪ್
* ಮೈದಾ 1 ಕಪ್
* ಇಂಗು 1/2 ಚಮಚ
* ಅರಿಶಿನ 1/2 ಚಮಚ
* ಖಾರದ ಪುಡಿ 1/2 ಚಮಚ
* ಉಪ್ಪು ರುಚಿಗೆ ತಕ್ಕಷ್ಟು
* ಬೆಣ್ಣೆ 1 ಸೌಟು
* ಮೊಸರು 1/2 ಕಪ್
 
 ತಯಾರಿಸುವ ವಿಧಾನ:
 
ಸಾಮಾನ್ಯವಾಗಿ ಚಕ್ಕುಲಿಗೆ ಉದ್ದನ್ನು ಹಾಕಿ ಮಾಡುವುದು ವಾಡಿಕೆ. ಆದರೆ ಉದ್ದನ್ನು ಹಾಕದೇ ಬೆಣ್ಣೆ ಚಕ್ಕುಲಿಯನ್ನು ಹೇಗೆ ಮಾಡುವುದೆಂದರೆ ಮೊದಲು ಒಂದು ಪಾತ್ರೆಯಲ್ಲಿ 1 ಕಪ್ ಅಕ್ಕಿ ಹಿಟ್ಟು, 1/2 ಕಪ್ ಮೈದಾ, ಚಿಟಕೆ ಇಂಗು, ಅರಿಶಿನ 1/2 ಚಮಚ, ಖಾರದ ಪುಡಿ 1/2 ಚಮಚ, ಉಪ್ಪು, 1 ಸೌಟು ಬೆಣ್ಣೆ, 1/2 ಕಪ್ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ಚಕ್ಕುಲಿ ಅಂಡೆಯನ್ನು ಬಳಸಿ ಚಕ್ಕುಲಿಯನ್ನು ಒತ್ತಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಣ್ಣ ಬರುವವರೆಗೆ ಕಾಯಿಸಿ ತೆಗೆಯಬೇಕು. ಹೀಗೆ ಮಾಡಿದರೆ ರುಚಿಯಾದ ಗರಿ ಗರಿಯಾದ ಇನ್‌ಸ್ಟೆಂಟ್ ಬೆಣ್ಣೆ ಚಕ್ಕುಲಿ ತಿನ್ನಲು ಸಿದ್ಧ.  ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಾಲಾಕ್ ಪಲಾವ್

ಘಮಘಮಿಸುವ ಪಲಾವ್ ಅನ್ನು ಪೋಷಕಾಂಶಗಳ ಗಣಿಯಾಗಿರುವ ಪಾಲಕ್ ಸೊಪ್ಪಿನಿಂದ ಮಾಡಿದರೆ ರುಚಿಗೆ ರುಚಿ, ಆರೋಗ್ಯವು ...

news

ನಿಂಬೆಹಣ್ಣಿನ ಸಿಹಿ ಉಪ್ಪಿನಕಾಯಿ...

ಸಾಮಾನ್ಯವಾಗಿ ಎಲ್ಲರೂ ಊಟದ ಜೊತೆಗೆ ಉಪ್ಪಿನಕಾಯಿಯನ್ನು ಬಳಸೇ ಬಳಸುತ್ತಾರೆ. ಉಪ್ಪಿನಕಾಯಿ ...

news

ನರಹುಲಿ (Warts) ಹೇಗೆ ಉಂಟಾಗುತ್ತದೆ? ನಿವಾರಣೆ ಹೇಗೆ?

ಚರ್ಮದ ಮೇಲೆ ನರಹುಲಿ ಅಥವಾ ಸಣ್ಣಗಂತಿಗಳು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಇಂಗ್ಲೀಷ್‌ನಲ್ಲಿ ...

news

ಟೂತ್‌ಪೇಸ್ಟ್.. ಹಲ್ಲುಗಳಲ್ಲದೆ, ಮತ್ತೆಷ್ಟೋ ಕೆಲಸಗಳಿಗೆ ಬಳಸಬಹುದು!

ಟೂತ್‌ಪೇಸ್ಟ್ ಹಲ್ಲು ಸ್ವಚ್ಛಗೊಳಿಸಲು ಮಾತ್ರ ಎಂದುಕೊಂಡರೆ ಅದು ತಪ್ಪು. ಪೇಸ್ಟ್‌ನಿಂದ ಇನ್ನೂ ಹಲವಾರು ...