ಹಲಸಿನ ಹಣ್ಣಿನ ಹೆಸರನ್ನು ಕೇಳಿದರೇ ಬಾಯಲ್ಲಿ ನೀರೂರಿಸುತ್ತದೆ. ಹಲಸಿನ ಹಣ್ಣಿನ ತೊಳೆಯನ್ನು ಹಾಗೆಯೇ ತಿಂದರೂ ಅಥವಾ ಅದರಿಂದ ಖಾದ್ಯಗಳನ್ನು ಮಾಡಿಕೊಂಡು ತಿಂದರೂ ಹಲಸಿನ ಹಣ್ಣಿನ ರುಚಿಗೆ ಸಾಟಿಯೇ ಇಲ್ಲ. ಮಲೆನಾಡುಗಳಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಹಾಗಾದರೆ ನಾವೂ ಸಹ ಹಲಸಿನ ಹಣ್ಣಿನ ಬಗೆ ಬಗೆಯ ಖಾದ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ. ಒಮ್ಮೆ ಟ್ರೈ ಮಾಡಿ ನೋಡಿ..