ಹಸಿದಾಗ ಹಲಸು, ಉಂಡಾಗ ಮಾವು ಎಂದು ನಮ್ಮ ಹಳಬರು ಹೇಳಿದ್ದಾರೆ. ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ.