ಕಜ್ಜಾಯ / ಅತ್ತಿರಸ

ಬೆಂಗಳೂರು, ಬುಧವಾರ, 14 ನವೆಂಬರ್ 2018 (15:32 IST)


ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಅಕ್ಕಿ 4 ಪಾವು
* ಬೆಲ್ಲ 3 ಪಾವು
* ಏಲಕ್ಕಿ ಪುಡಿ
* ಬಿಳಿ ಎಳ್ಳು
* ಎಣ್ಣೆ
 
ತಯಾರಿಸುವ ವಿಧಾನ :
 
ಮೊದಲು 4 ಪಾವು ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು 6 ಗಂಟೆಗಳ ಕಾಲ ನೆನೆಸಬೇಕು. ನಂತರ ನೀರನ್ನು ತೆಗೆದು ಒಂದು ಬಟ್ಟೆಯ ಮೇಲೆ ತೆಳುವಾಗಿ ಹರಡಬೇಕು. ನಂತರ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಬೇಕು. ಅದಕ್ಕೆ ಜರಡಿ ಹಿಡಿದು ಒಂದು ಪಾತ್ರೆಯಲ್ಲಿ ಮುಚ್ಚಿಡಬೇಕು. ನಂತರ ಒಂದು ಪಾತ್ರೆಗೆ ಮೂರುವರೆ ಪಾವು ಬೆಲ್ಲವನ್ನು ಹಾಕಿ ಅದೇ ಪಾವಿನ ಅಳತೆಯಲ್ಲಿ ಅರ್ಧ ನೀರನ್ನು ಹಾಕಿ ಒಲೆಯ ಮೇಲಿಡಬೇಕು. ಅದು ಕರಗಿದ ನಂತರ ಒಂದು ಪಾತ್ರೆಗೆ ಸೋಸಿಕೊಳ್ಳಬೇಕು. 
 
ಬೆಲ್ಲದ ಪಾತ್ರೆಯನ್ನು ಮೀಡಿಯಂ ಉರಿಯಲ್ಲಿಟ್ಟು ಕಲುಕುತ್ತಾ ಇರಬೇಕು. (ಅದು ಪಾಕವಾಗುವ ತನಕ) ನಂತರ ಬೆಲ್ಲದ ಪಾತ್ರೆಯನ್ನು ಇಳಿಸಿ ಅದಕ್ಕೆ ಒಂದು ಚಮಚ ಏಲಕ್ಕಿ ಪುಡಿ, ಒಂದು ಕಪ್ ಹುರಿದ ಬಿಳಿ ಎಳ್ಳನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕಿ ತಿರುವಿಕೊಳ್ಳಬೇಕು. ನಂತರ ಅದರ ಮೇಲೆ ಎಣ್ಣೆಯನ್ನು ಹಾಕಿ ಮುಚ್ಚಿಡಬೇಕು. ನಂತರ ಒಂದು ಹಾಳೆಯ ಮೇಲೆ ಸಣ್ಣ ಸಣ್ಣ ಉಂಡೆಯನ್ನು ಮಾಡಿ ಎಣ್ಣೆ ಕೈ ಮಾಡಿಕೊಂಡು ತಟ್ಟಿ ಕಾದ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಎರಡೂ ಕಡೆ ಬೇಯಿಸಿದರೆ ರುಚಿರುಚಿಯಾದ ಸವಿಯಲು ಸಿದ್ಧ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೋಡುಬಳೆ

ಚಾಟ್ಸ್ ಎಂದರೆ ಎಲ್ಲಾ ವಯೋಮಾನದವರಿಗೂ ಇಷ್ಟಾನೇ. ಅದರಲ್ಲಿಯೂ ಸಂಜೆಯ ವೇಳೆ ಟೀ ಅಥವಾ ಕಾಫಿಯ ಜೊತೆಗೆ ...

news

ದೀಪಾವಳಿಗೆ ಸ್ಪೆಷಲ್ ಹಾಲುಬಾಯಿಗಳು

ಹಬ್ಬಎಂದರೆ ಸಡಗರ..ಅದರಲ್ಲಿಯೂ ದೀಪಾವಳಿಯು ಎಲ್ಲಾ ಕಡೆ ವಿಧ ವಿಧವಾಗಿ ಆಚರಿಸುವ ಹಬ್ಬ. ನಾನಾ ಬಗೆಯ ತಿಂಡಿ ...

news

ಖರ್ಜಿಕಾಯಿ

ಮೊದಲು ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಬಿಸಿ ಮಾಡಿದ ತುಪ್ಪ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ...

news

ಐ-ಲೈನರ್ ಪೆನ್ಸಿಲ್ ಗಳು ತುಂಬಾ ತೆಳುವಾಗಿ ಗೆರೆಗಳನ್ನು ಬಿಡಿಸುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಮೇಕಪ್ ಗೆ ಬಳಸುವ ಐ-ಲೈನರ್ ಪೆನ್ಸಿಲ್ ಗಳು ತುಂಬಾ ತೆಳುವಾಗಿರುವ, ಬಿಡಿಸಲು ಕಷ್ಟವಾಗುವಂತಹ ...