ಸ್ವಾದಿಷ್ಠ ಕಾಶ್ಮೀರಿ ಪಲಾವ್..!

ಬೆಂಗಳೂರು, ಸೋಮವಾರ, 25 ಮಾರ್ಚ್ 2019 (14:35 IST)

ಪಲಾವ್ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ... ಎಲ್ಲರೂ ಇಷ್ಟಪಟ್ಟು ತಿನ್ನುವ ಅಡುಗೆಯಾಗಿದೆ. ಹಲವು ಮಸಾಲೆ ಪದಾರ್ಥಗಳನ್ನು ಬಳಸಿ ಮಾಡುವ ಪಲಾವ್ ಘಮಘಮವೆನ್ನುತ್ತಿರುತ್ತದೆ. ಆದರೆ ಹಲವು ಸ್ಥಳಗಳಿಗೆ ತಕ್ಕಂತೆ ಅದರ ರುಚಿ ಮತ್ತು ಮಾಡುವ ವಿಧಾನಗಳು ಬೇರೆಯಾಗುತ್ತವೆ. ಕಾಶ್ಮೀರಿ ಪಲಾವ್ ಮಾಡುವ ವಿಧಾನಕ್ಕಾಗಿ ಮುಂದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ - 11/2 ಕಪ್
ಎಣ್ಣೆ - 2 ಚಮಚ
ತುಪ್ಪ - 2 ಚಮಚ
ಲವಂಗದ ಎಲೆ - 1
ಲವಂಗ - 3-4
ಏಲಕ್ಕಿ - 3-4
ಚೆಕ್ಕೆ - 1 ಚೂರು
ಜೀರಿಗೆ - 1 ಚಮಚ
ಶುಂಠಿ ಪೇಸ್ಟ್ - 1 ಚಮಚ
ಗೋಡಂಬಿ - 6-7
ಬಾದಾಮಿ - 6-7
ಈರುಳ್ಳಿ - 1-2
ಸೋಂಪು ಪುಡಿ - 1 ಚಮಚ
ಕೇಸರಿ ಹಾಲು - 1/2 ಕಪ್
ಒಣದ್ರಾಕ್ಷಿ - 1/4 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ದಾಳಿಂಬೆ ಬೀಜ - ಸ್ವಲ್ಪ
ಸೇಬು - ಸ್ವಲ್ವ
ಹುರಿದ ಈರುಳ್ಳಿ ಸ್ಲೈಸ್ - ಸ್ವಲ್ಪ
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಅದಕ್ಕೆ ಲವಂಗದ ಎಲೆ, ಲವಂಗ, ಏಲಕ್ಕಿ, ಚೆಕ್ಕೆ, ಜೀರಿಗೆ ಮತ್ತು ಶುಂಠಿ ಪೇಸ್ಟ್ ಅನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದಕ್ಕೆ ಗೋಡಂಬಿ, ಬಾದಾಮಿ, ಸ್ಲೈಸ್ ಮಾಡಿದ ಒಂದು ಈರುಳ್ಳಿ ಮತ್ತು ಸೋಂಪು ಪುಡಿಯನ್ನು ಹಾಕಿ ಈರುಳ್ಳಿ ಬೇಯುವವರೆಗೆ ಹುರಿಯಿರಿ. ನಂತರ ಇದಕ್ಕೆ ತೊಳೆದಿಟ್ಟ 11/2 ಕಪ್ ಭಾಸುಮತಿ ಅಕ್ಕಿ, ಕೇಸರಿ ಹಾಲು, ಒಣದ್ರಾಕ್ಷಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ 2 ಚಮಚ ತುಪ್ಪವನ್ನು ಬೆರೆಸಿ ಮಧ್ಯಮ ಉರಿಯಲ್ಲಿ 15 ನಿಮಿಷ ಪ್ಯಾನ್ ಅನ್ನು ಮುಚ್ಚಿ ಬೇಯಿಸಿದರೆ ಕಾಶ್ಮೀರಿ ಪಲಾವ್ ರೆಡಿಯಾಗುತ್ತದೆ. ಇದನ್ನು ಒಂದು ಬೌಲ್‌ಗೆ ಹಾಕಿ ಅದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮತ್ತು ಹೆಚ್ಚಿದ ಸೇಬು, ಹುರಿದ ಈರುಳ್ಳಿ ಸ್ಲೈಸ್, ದಾಳಿಂಬೆ ಬೀಜಗಳಿಂದ ಅಲಂಕರಿಸಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ರವಾ ಉತ್ತಪ್ಪ..

ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಗೆ ಹೆಚ್ಚು ಜನಪ್ರಿಯವಾಗಿರುವುದು ಮತ್ತು ಬಹುತೇಕ ಎಲ್ಲಾ ಮನೆಗಳಲ್ಲೂ ...

news

ಪಟಾಪಟ್ ಸ್ವಾದಿಷ್ಠ ಆಲೂಪಲಾವ್

ಒಂದೇ ರೀತಿಯ ರೈಸ್ ಬಾತ್‌ ಪಲಾವ್‌ಗಳನ್ನು ತಿಂದು ನಿಮಗೆ ಬೇಜಾರಾಗಿದ್ದಲ್ಲಿ ರುಚಿಕರವಾದ ಶೀಘ್ರವಾಗಿ ಮತ್ತು ...

news

ಪೌಷ್ಟಿಕಾಂಶಗಳು ಯಾವ್ಯಾವ ಆಹಾರ ಪದಾರ್ಥಗಳಲ್ಲಿವೆ ಎಂಬುದು ತಿಳಿದಿದೆಯೇ?

ಈಗಿನ ವಿದ್ಯಮಾನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಕಲುಷಿತ ವಾತಾವರಣ, ದಿನದಿಮದ ...

news

ಸ್ವಾದಿಷ್ಠ ನಾಟಿ ಮಟನ್ ಕರಿ

ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ನಾನ್ ವೆಜ್ ಅಡುಗೆಗಳ ಎಲ್ಲಾ ಮಸಾಲೆಗಳು ಕೈಯಿಂದ ...