ಕೆಸುವಿನ ಎಲೆಗಳು ವರ್ಷದ ಎಲ್ಲಾ ದಿನಗಳಲ್ಲೂ ಲಭ್ಯವಿದೆಯಾದರೂ ಮಳೆಗಾಲದ ದಿನಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಕಾರಣ ಮಳೆಗಾಲದಲ್ಲಿಯೇ ಹೆಚ್ಚಾಗಿ ಬಳಸುತ್ತಾರೆ. ಪ್ರಪಂಚದಾದ್ಯಂತ ಕೆಸುವಿನ ಎಲೆಗಳಲ್ಲಿ ಹಲವಾರು ವೈವಿಧ್ಯಗಳಿದ್ದು ಭಾರತದ ಹಲವು ಭಾಗಗಳಲ್ಲಿ ಇದನ್ನು ಅಡುಗೆಯಲ್ಲಿ ಬಳಸುತ್ತಾರೆ. ಕೆಸುವಿನ ಎಲೆಯಲ್ಲಿ ಕ್ಯಾಲ್ಶಿಯಂ ಆಕ್ಸಲೇಟ್ ಇದ್ದು ಎಲೆಗಳು ಸರಿಯಾಗಿ ಬೇಯದಿದ್ದರೆ ಅಥವಾ ಸರಿಯಾದ ಪ್ರಮಾಣದ ಹುಣಿಸೆ ಹಣ್ಣನ್ನು ಬಳಸದಿದ್ದರೆ ಇದು ತುರಿಕೆಗೆ ಕಾರಣವಾಗುತ್ತದೆ. ರುಚಿಯಾದ ಕೆಸುವಿನ