ಬೆಂಗಳೂರು:ಮಳೆಗಾಲದಲ್ಲಿ ಬಿಸಿಬಿಸಿ ಖಾರಖಾರವಾದ ಪದಾರ್ಥಗಳನ್ನು ತಿನ್ನಬೇಕು ಎಂಬ ಆಸೆ ಸಹಜವಾದದ್ದು. ಅದರಲ್ಲೂ ಬಿಸಿಬಿಸಿಯಾದ ಅನ್ನಕ್ಕೆ ರುಚಿಕರವಾದ ರಸಂ ಬಡಿಸಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದ್ದು. ಮನಸ್ಸಿಗೂ ಹಿತ. ಇದು ನೆಗಡಿ, ಕೆಮ್ಮುವನ್ನು ಕೂಡ ಕಡಿಮೆಮಾಡುತ್ತದೆ. ಸಾಮಾಗ್ರಿಗಳು ತೊಗರಿಬೇಳೆ ½ ಕಪ್, ಕೊತ್ತಂಬರಿಸೊಪ್ಪು ಸ್ವಲ್ಪ, ಜೀರಿಗೆ ½ ಚಮಚ, ½ ಚಮಚ ಸಾಸಿವೆ, ಸ್ವಲ್ಪ ಕರಿಬೇವಿನ ಎಸಳು, ಚಿಟಿಕೆ ಎಂಗು, ಹಸಿಮೆಣಸು-2, ಉಪ್ಪು ರುಚಿಗೆ, ಬೆಲ್ಲ-1 ಚಮಚ, 3 ಚಮಚ-ನಿಂಬೆರಸ, ಅರಿಶಿನ ಚಿಟಿಕೆ.