ರುಚಿಯಾದ ಶುಗರ್ ಫ್ರೀ ಮೋದಕ ಮಾಡಿ ಸವಿಯಿರಿ..

ಬೆಂಗಳೂರು, ಸೋಮವಾರ, 25 ಮಾರ್ಚ್ 2019 (18:22 IST)

ನಮ್ಮ ಆರೋಗ್ಯ ನಮ್ಮ ಊಟದ ತಟ್ಟೆಯನ್ನು ಆಧರಿಸಿದೆ. ನಾವು ಸೇವಿಸುವ ನಮ್ಮ ದೇಹಕ್ಕೆ ಸೇರುವ ಸಕ್ಕರೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಹಬ್ಬದ ದಿನಗಳಲ್ಲೂ ಸಿಹಿ ತಿನ್ನದಿರುವುದು ಕಷ್ಟಕರವಾದ ವಿಷಯವಾಗಿದೆ. ಸಕ್ಕರೆ ಕಾಯಿಲಇರುವವರಿಗಂತೂ ವೈದ್ಯರು ಸಕ್ಕರೆಯಿಂದ ಆದಷ್ಟು ದೂರವಿರುವಂತೆ ಸೂಚಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಆರೋಗ್ಯಕ್ಕೂ ಹಿತವಾದ, ಬಾಯಿಗೂ ರುಚಿಯಾದ ಈ ಶುಗರ್ ಫ್ರೀ ಮೋದಕವನ್ನು ಮಾಡಿಕೊಳ್ಳಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ತುಪ್ಪ - 2-3 ಟೇಬಲ್ ಚಮಚ
ಬಾದಾಮಿ - 8-10
ಗೋಡಂಬಿ - 8-10
ಒಣದ್ರಾಕ್ಷಿ - 2 ಟೇ ಚಮಚ
ಗಸಗಸೆ ಬೀಜ - 1/2 ಟೇ ಚಮಚ
ಖರ್ಜೂರ - 1/2 ಕಪ್
ಹಾಲು - 1/4 ಕಪ್
ಹಾಲಿನ ಪುಡಿ - 1/2 ಕಪ್
ಕೊಬ್ಬರಿ ತುರಿ - 1/4 ಕಪ್
ಏಲಕ್ಕಿ ಪುಡಿ - 18/2 ಟೇ ಚಮಚ
ಅಕ್ಕಿ ಹಿಟ್ಟು - 1 ಕಪ್
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
ಒಂದು ಪ್ಯಾನ್‌ನಲ್ಲಿ 1 ಚಮಚ ತುಪ್ಪವನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಬಾದಾಮಿ, ಗೋಡಂಬಿ ಚೂರುಗಳು, ಮತ್ತು ಒಣದ್ರಾಕ್ಷಿಯನ್ನು ಹಾಕಿ ಕಡಿಮೆ ಉರಿಯಲ್ಲಿ 1 ನಿಮಿಷ ಹುರಿಯಿರಿ. ಹೊಂಬಣ್ಣ ಬಂದ ನಂತರ ಇದಕ್ಕೆ ಗಸಗಸೆ ಮತ್ತು ಖರ್ಜೂರದ ಚೂರುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಹುರಿಯುತ್ತಾ ಮಿಶ್ರಣವು ಚೆನ್ನಾಗಿ ಸೇರಿಕೊಂಡ ನಂತರ ಅದನ್ನು ಒಂದು ಬೌಲ್‌ಗೆ ಹಾಕಿ. ನಂತರ ಅದೇ ಪ್ಯಾನ್‌ನಲ್ಲಿ 1/2 ಚಮಚ ತುಪ್ಪ ಮತ್ತು 1/4 ಕಪ್ ಹಾಲನ್ನು ಹಾಕಿ ಬಿಸಿ ಮಾಡಿ. ತುಪ್ಪ ಕರಗಿದ ನಂತರ ಅದಕ್ಕೆ ಹಾಲಿನ ಪುಡಿಯನ್ನು ಮಿಕ್ಸ್ ಮಾಡಿ ಗಂಟಾಗದಂತೆ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಈ ಮಿಶ್ರಣವು ಗಟ್ಟಿಯಾಗಿ ಪ್ಯಾನ್‌ನ ತಳವನ್ನು ಸಂಪೂರ್ಣವಾಗಿ ಬಿಟ್ಟು ಒಂದು ಉಂಡೆಯಾದಾಗ ಇದಕ್ಕೆ ಕೊಬ್ಬರಿ ತುರಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಈಗಾಗಲೇ ರೆಡಿಮಾಡಿಟ್ಟಿರುವ ಡ್ರೈ ಫ್ರೂಟ್ಸ್ ಮಿಶ್ರಣ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹೂರಣ ಸಿದ್ಧವಾಗುತ್ತದೆ.
 
ಈಗ ಇನ್ನೊಂದು ಪ್ಯಾನ್‌ನಲ್ಲಿ 11/4 ಕಪ್ ನೀರು ಮತ್ತು 1/4 ಟೇ ಚಮಚ ಉಪ್ಪು ಮತ್ತು 1/2 ಟೇ ಚಮಚ ತುಪ್ಪವನ್ನು ಹಾಕಿ ಕುದಿಸಿ. ನೀರು ಕುದಿಯುವಾಗ ಅದಕ್ಕೆ 1 ಕಪ್ ಅಕ್ಕಿ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉರಿಯನ್ನು ಆಫ್ ಮಾಡಿ ಅದನ್ನು 5 ನಿಮಿಷಗಳವರೆಗೆ ಅದನ್ನು ಮುಚ್ಚಿಡಿ. ನಂತರ ಅದನ್ನು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ನಾದಿ ಅಂಟದ ಮೃದು ಹಿಟ್ಟಿನ ಉಂಡೆಯನ್ನು ತಯಾರಿಸಿಕೊಳ್ಳಿ. ನಂತ ಈ ಹಿಟ್ಟನ್ನು ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಂಡು ಅದರಲ್ಲಿ ಹೂರಣವನ್ನು ತುಂಬಿ ಕೈಯಿಂದ ಅಥವಾ ಮೋದಕದ ಅಚ್ಚಿನ ಸಹಾಯದಿಂದ ಮೋದಕದ ಆಕಾರವನ್ನು ನೀಡಿ. ಹೀಗೆ ತಯಾರಿಸಿಕೊಂಡ ಮೋದಕಗಳನ್ನು 10 ನಿಮಿಷ ಉಗಿಯಲ್ಲಿ ಬೇಯಿಸಿದರೆ ರುಚಿಯಾದ ಶುಗರ್ ಫ್ರೀ ಸವಿಯಲು ಸಿದ್ಧವಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸುಲಭವಾಗಿ ಹಾಲಿನಿಂದ ಐಸ್‌ಕ್ರೀಮ್ ಮಾಡಿ ಸವಿಯಿರಿ

ಚಿಣ್ಣರಿಂದ ವೃದ್ಧರವರೆಗೂ ಇಷ್ಟಪಡುವ ತಿನಿಸು ಎಂದರೆ ಐಸ್‌ಕ್ರೀಮ್ ಎಂದು ಹೇಳಬಹುದು. ಓವನ್ ಇಲ್ಲದೇ ಕೇವಲ ...

news

ಸ್ವಾದಿಷ್ಠ ಅಕ್ಕಿ ಸಂಡಿಗೆ

ಮೊದಲು ಅಕ್ಕಿಯನ್ನು 2 ರಿಂದ 3 ದಿನ ಬಿಸಿಲಿನಲ್ಲಿ ಒಣಗಿಸಬೇಕು ಅಂದರೆ ಪ್ರತಿದಿನ ಅಕ್ಕಿಯನ್ನು ತೊಳೆದು ...

news

ಸ್ವಾದಿಷ್ಠ ಮೂಲಂಗಿ ಚಟ್ನಿ

ಮೊದಲು ಒಂದು ಬಾಣಲೆಯಲ್ಲಿ ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಹುರಿದಿಟ್ಟುಕೊಳ್ಳಬೇಕು. ನಂತರ ಸ್ವಲ್ಪ ...

news

ಸ್ವಾದಿಷ್ಠ ಸೌತೆಬೀಜದ ತಂಬುಳಿ

ಸಾಮಾನ್ಯವಾಗಿ ನಾವು ಬೀಜಗಳನ್ನು ಬಿಸಾಕುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ...