ಮೊದಲು ನವಣೆಯನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. (ಇಲ್ಲವಾದರೆ ಬಾಣಲೆಯಲ್ಲಿ ನವಣೆಯನ್ನು ಚೆನ್ನಾಗಿ ಹುರಿದು ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟರೆ ಬೇಗ ಮೃದುವಾಗುತ್ತದೆ) ನಂತರ ಕುಕ್ಕರಿನಲ್ಲಿ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ಈರುಳ್ಳಿಯನ್ನು ಹಾಕಿ ಹುರಿದು ತರಕಾರಿಗಳನ್ನು ಸೇರಿಸಬೇಕು.