ಮಳೆಗಾಲದ ಈ ಚಳಿಗೆ ನಿಮ್ಮ ಆರೋಗ್ಯವನ್ನು ಬೆಚ್ಚಗಿಡಲು ನಿಂಬು ಮತ್ತು ಶುಂಠಿ ಮಿಶ್ರಿತ ರಸಮ್ ಸಹಾಯ ಮಾಡುವುದು. ಹುಳಿ, ಸಿಹಿ ಮತ್ತು ಖಾರದ ಮಿಶ್ರಣದಲ್ಲಿ ತಯಾರಿಸಲಾಗುವ ಈ ರಸಮ್ ಅನ್ನು ಅನ್ನದ ಜೊತೆ ಸವಿಯಬಹುದು. ಇಲ್ಲವೇ ನೀವು ಬಯಸುವುದಾದರೆ ಬಿಸಿಬಿಸಿ ಇರುವಾಗ ಕಷಯಾಯದ ರೂಪದಲ್ಲಿಯೂ ಕುಡಿಯಬಹುದು. ಗಂಟಲ ಕೆರತ ಅಥವಾ ಶೀತದ ಸಮಸ್ಯೆ ಇದ್ದರೆ ಒಳ್ಳೆಯ ಉಪಶಮನ ದೊರೆಯುವುದು. ಸುಲಭ ಹಾಗೂ ಸರಳ ವಿಧಾನದಲ್ಲಿ ಹೇಗೆ ತಯಾರಿಸುವುದು ಎನ್ನುವುದನ್ನು ಇಲ್ಲಿ