ಮಾವಿನಕಾಯಿ ಅಪ್ಪೆಹುಳಿ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ತುಂಬಾ ಜನಪ್ರಿಯವಾದದ್ದು. ಮಾವಿನಕಾಯಿಯ ಸೀಸನ್ನಲ್ಲಿ ಬಹುಪಾಲು ಜನರು ಇದನ್ನು ಮಾಡಿ ಸವಿಯುತ್ತಾರೆ. ಉಪ್ಪು, ಹುಳಿ, ಖಾರದಿಂದ ಕೂಡಿರುವ ಇದು ಬಹಳ ರುಚಿಯಾಗಿರುತ್ತದೆ ಮತ್ತು ಮಾಡುವುದೂ ಸುಲಭ. ಬೇಕಾಗುವ ಸಾಮಗ್ರಿಗಳು: ಹುಳಿ ಮಾವಿನಕಾಯಿ - 1 ಬೆಳ್ಳುಳ್ಳಿ - 1 ಗಡ್ಡೆ ಹಸಿಮೆಣಸು - 2 ಕರಿಬೇವು - ಸ್ವಲ್ಪ ಉಪ್ಪು - ರುಚಿಗೆ ಬೆಲ್ಲ - ಸ್ವಲ್ಪ ಇಂಗು