ಮೊದಲು ಮರಬದನೆಯನ್ನು ಕಟ್ ಮಾಡಿ ಮೂರರಿಂದ ನಾಲ್ಕು ಬಾರಿ ಹಿಚುಕಿ ಬೀಡ ಹೋಗುವವರೆಗೆ ತೊಳೆದು ಬೇಯಲು ಇಡಬೇಕು. ನಂತರ ಬಾಣಲೆಯಲ್ಲಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಕರಿಬೇವು, ಧನಿಯಾ ಹಾಕಿ ಕೆಂಪಗೆ ಹುರಿದು ಕಾಯಿತೊರೆಯೊಂದಿಗೆ ರುಬ್ಬಿಕೊಳ್ಳಬೇಕು.