ಗಣೇಶನ ಹಬ್ಬವೆಂದರೆ ತಿಂಡಿಗಳ ಜಾತ್ರೆ. ಮೋದಕ, ಚಕ್ಕುಲಿ, ಕಡುಬು, ಲಡ್ಡು, ಹೋಳಿಗೆ.. ಹೀಗೆ ಪಟ್ಟಿ ಹನುಮನ ಬಾಲದಂತೆ ಉದ್ದವಾಗುತ್ತಲೇ ಹೋಗುತ್ತದೆ. ಗಣೇಶ ಚತುರ್ಥಿ, ನವರಾತ್ರಿಯಂತಹ ಹಬ್ಬಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನರು ಸಾಂಪ್ರದಾಯಿಕವಾದ ಪಂಚಕಜ್ಜಾಯಗಳನ್ನು ಮಾಡುತ್ತಾರೆ. ನಿಮಗೆ ಇದರ ಕುರಿತು ತಿಳಿದಿರದಿದ್ದರೆ ಸರಳ ಸಾಂಪ್ರದಾಯಿಕವಾದ ಈ ತಿಂಡಿಯನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡಿ. 1. ಎಳ್ಳಿನ ಪಂಚಕಜ್ಜಾಯ ಬೇಕಾಗುವ ಸಾಮಗ್ರಿಗಳು: ಬಿಳಿ ಎಳ್ಳು - 1 1/2 ಕಪ್