ಬೆಂಗಳೂರು: ಅನ್ನ, ಸಾರು ಊಟ ಮಾಡುವಾಗ ಜೊತೆಗೆ ಏನಾದರೂ ಸೈಡಲ್ಲಿ ತಿನ್ನಲು ಬೇಕು ಅಂತ ಎಲ್ಲರಿಗೂ ಸಹಜವಾಗಿ ಅನಿಸುತ್ತೆ. ಏನಾದರೂ ಮಾಡಬೇಕು ಅಂದಾಗ ತುಂಬಾ ಸಮಯ ಬೇಕಾಗುತ್ತೆ. ಆದ್ದರಿಂದ ಆಲೂಗಡ್ಡೆ ಪ್ರೈಯನ್ನು ಮಾಡಿದರೆ ಊಟದ ಜೊತೆ ತಿನ್ನಬಹುದು. ಇದು ಸುಲಭವಾಗಿ ಬೇಗ ರೆಡಿಯಾಗುತ್ತದೆ. ಬೇಕಾಗುವ ಸಾಮಾಗ್ರಿಗಳು: ಆಲೂಗಡ್ಡೆ(ನಿಮಗೆ ಬೇಕಾಗುವಷ್ಟು), ನಿಂಬೆಹಣ್ಣು, ಉಪ್ಪು, ಅರಶಿನ ಪುಡಿ, ಮೆಣಸಿನ ಪುಡಿ, ರವಾ, ಗರಂಮಸಾಲ ಪುಡಿ, ಎಣ್ಣೆ. ಮಾಡುವ ವಿಧಾನ: ಮೊದಲು ಆಲೂಗಡ್ಡೆಯನ್ನು ತೊಳೆದು