ತಂತ್ರಜ್ಞಾನವು ಎಷ್ಟೇ ಮುಂದುವರೆದರೂ ಮನುಷ್ಯ ಹಸಿವೆಯನ್ನು ನಿಯಂತ್ರಿಸಲಾರ. ಹಸಿವು ಅನ್ನುವುದು ವರವೂ ಹೌದು ಶಾಪವೂ ಹೌದು. ಅದರಲ್ಲಿಯೂ ಸಾಯಂಕಾಲ ಟೀ ಕುಡಿಯುವ ಹವ್ಯಾಸವಿರುವವರಿಗೆ ಟೀ ಜೊತೆಗೆ ಏನಾದರೂ ತಿಂಡಿಯನ್ನೂ ಸಹ ತಿನ್ನುವ ಅಭ್ಯಾಸವಿರುತ್ತದೆ. ಆದರಲ್ಲಿಯೂ ಮನೆಯಲ್ಲೇ ಕೆಲವು ತಿಂಡಿಗಳನ್ನು ಸುಲಭವಾಗಿ ದಿಢೀರ್ ಎಂದು ತಯಾರಿಸಿಕೊಳ್ಳಬಹುದು. ಹಾಗಾದರೆ ಅಂತಹ ತಿಂಡಿಗಳಲ್ಲಿ ಪುದೀನಾ ಸೊಪ್ಪಿನ ಮುರುಕೂ ಸಹ ಒಂದು ಎಂದು ಹೇಳಬಹುದು. ಇದನ್ನು ಮನೆಯಲ್ಲಿಯೇ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಿಕೊಂಡು ಸವಿಯಬಹುದು.