ಜಿಟಿಪಿಟಿ ಮಳೆಗೆ ಗರಿ ಗರಿಯಾದ ರವಾ ವಡಾ

ಬೆಂಗಳೂರು| pavithra| Last Modified ಶನಿವಾರ, 29 ಆಗಸ್ಟ್ 2020 (07:42 IST)
ಬೆಂಗಳೂರು : ರವಾಯಿಂದ ಹಲವು ಬಗೆಯ ರುಚಿಕರವಾದ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ರವಾ ವಡಾ ಕೂಡ ಒಂದು. ಇದನ್ನು ಮಾಡುವುದು ಹೇಗೆಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ಚಿರೋಟಿ ರವಾ, ¾ ಕಪ್ ಮೊಸರು, ಉಪ್ಪು, ¼ ಚಮಚ ಅಡುಗೆ ಸೋಡಾ, 4 ಹಸಿಮೆಣಸಿನಕಾಯಿ, 2 ಚಮಚ ಕೊತ್ತಂಬರಿ ಸೊಪ್ಪು, ಕರಿಬೇವು, ½ ಇಂಚು ಶುಂಠಿ, 2 ಚಮಚ ತೆಂಗಿನಕಾಯಿ ತುರಿ, 1 ಚಮಚ ತುಪ್ಪ, ಎಣ್ಣೆ.

ಮಾಡುವ ವಿಧಾನ : ತುಪ್ಪದಲ್ಲಿ ರವಾವನ್ನು ಮಿಶ್ರಣ ಮಾಡಿ. ಬಳಿಕ ಅದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿಯನ್ನು ಮೊಸರಿನೊಂದಿಗೆ ಸೇರಿಸಿ 25 ನಿಮಿಷಗಳ ಕಾಲ ಹಾಗೇ ಇಡಿ.  ಆಮೇಲೆ ಎಣ್ಣೆ ಬಿಸಿ ಮಾಡಿ ಕಾದ ಬಳಿಕ ರವಾ ಮಿಶ್ರಣ ಸ್ವಲ್ಪ ತೆಗೆದುಕೊಂಡು ಕೈಯಿಂದ ವಡಾ ಆಕಾರ ತಯಾರಿಸಿ ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದರೆ ರವಾ ವಡಾ ರೆಡಿ.ಇದರಲ್ಲಿ ಇನ್ನಷ್ಟು ಓದಿ :