Widgets Magazine

ಸಬ್ಬಕ್ಕಿ ಕುರುಕುರೆ

ಬೆಂಗಳೂರು| Rajesh patil| Last Modified ಮಂಗಳವಾರ, 26 ಮಾರ್ಚ್ 2019 (17:40 IST)
ಬಾಯಲ್ಲಿ ಕುರುಂ ಕುರುಂ ಎಂದು ಸದ್ದನ್ನುಂಟು ಮಾಡುವ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲಿಯೂ ಸಬ್ಬಕ್ಕಿ ಕುರುಕರೆಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡು ಸವಿಯಬಹುದು. ಇದು ಚಹಾ-ಕಾಫಿಯೊಂದಿಗೆ ಸವಿಯಲು ಬಹಳ ರುಚಿಕರವಾಗಿರುತ್ತದೆ. 
   
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಸಬ್ಬಕ್ಕಿ ಹಿಟ್ಟು 1/2 ಕಪ್
* ಬೇಯಿಸಿದ ಆಲೂಗಡ್ಡೆ 4
* ಕರಿಮೆಣಸಿನಪುಡಿ 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕರಿಯಲು ಎಣ್ಣೆ
     
   ತಯಾರಿಸುವ ವಿಧಾನ:
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಬೇಕು. ನಂತರ ಅದಕ್ಕೆ ಸಬ್ಬಕ್ಕಿ ಹಿಟ್ಟು, ಕರಿಮೆಣಸಿನಪುಡಿ, ಉಪ್ಪನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. (ಒಂದು ಸ್ವಲ್ಪವೂ ನೀರನ್ನು ಸೇರಿಸಬೇಡಿ) ನಂತರ ಅದನ್ನು 20 ನಿಮಿಷ ನೆನೆಯಲು ಬಿಡಬೇಕು. ನಂತರ ಅದನ್ನು ಚಕ್ಕುಲಿ ಒರಳಿಗೆ ಹಾಕಿ ಒತ್ತಿ ಕಾಯ್ದ ಎಣ್ಣೆಯಲ್ಲಿ ಕೆಂಬಣ್ಣ ಬರುವವರೆಗೂ ಕರಿದರೆ ಸಬ್ಬಕ್ಕಿ ಕುರುಕುರೆ ಸವಿಯಲು ಸಿದ್ಧ. 


ಇದರಲ್ಲಿ ಇನ್ನಷ್ಟು ಓದಿ :