ಸುಲಭವಾಗಿ ಮಾಡುವ ರುಚಿಕರ ಬ್ರೆಡ್ ಪೇಡಾ

ಬೆಂಗಳೂರು| rajani| Last Modified ಶುಕ್ರವಾರ, 28 ಸೆಪ್ಟಂಬರ್ 2018 (17:33 IST)
ಬ್ರೆಡ್‌ನಿಂದ ಹಲವಾರು ರೀತಿಯ ಪದಾರ್ಥಗಳನ್ನು ತಯಾರಿಸಬಹುದು. ಬ್ರೆಡ್ ಅನ್ನು ಹಾಗೆಯೇ ಟೋಸ್ಟ್ ಮಾಡಿ ತಿಂದರೂ ರುಚಿಯೇ. ಇದರಿಂದ ಸುಲಭವಾಗಿ ಪೇಡಾವನ್ನೂ ಸಹ ತಯಾರಿಸಬಹುದು.  ನೀವೂ ಒಮ್ಮೆ ಟ್ರೈ ಮಾಡಿ ನೋಡಿ.  
ಬೇಕಾಗುವ ಸಾಮಗ್ರಿಗಳು :
* ಬ್ರೆಡ್ 4
* ಏಲಕ್ಕಿ ಪುಡಿ 2 ಚಮಚ
* ಸಕ್ಕರೆ ಪುಡಿ ಅರ್ಧ ಕಪ್
* ಹಾಲು 2 ರಿಂದ 3 ಚಮಚ
* ತುಪ್ಪ 2 ರಿಂದ 3 ಚಮಚ
* ಏಲಕ್ಕಿ ಕಾಳು 1 ಚಮಚ
* ಪಿಸ್ತಾ 1 ಚಮಚ
 
ತಯಾರಿಸುವ ವಿಧಾನ :
ಮೊದಲು ಬ್ರೆಡ್ ಅನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಇನ್ನೊಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದು ಬಿಸಿಯಾಗುತ್ತಿದ್ದಂತೆ ಈಗಾಗಲೇ ನುಣ್ಣಗೆ ಪುಡಿ ಮಾಡಿಕೊಂಡಿದ್ದನ್ನು ಅದಕ್ಕೆ ಮಿಕ್ಸ್ ಮಾಡಬೇಕು. ನಂತರ ಅದಕ್ಕೆ ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಹಾಲನ್ನು ಅದಕ್ಕೆ ಹಾಕಿ ಈ ಎಲ್ಲಾ ಮಿಶ್ರಣವನ್ನು ತಣ್ಣಗಾಗಲು ಬಿಡಬೇಕು. ನಂತರ ಎಲ್ಲವನ್ನೂ ಸೇರಿಸಿ ಉಂಡೆಯನ್ನು ಕಟ್ಟಿ ಪೇಡೆಯ ಆಕಾರವನ್ನು ನೀಡಬೇಕು. ಇದಕ್ಕೆ ಏಲಕ್ಕಿ ಕಾಳು ಹಾಗೂ ಪಿಸ್ತಾದಿಂದ ಅಲಂಕರಿಸಿದರೆ ರುಚಿಯಾದ ಬ್ರೆಡ್ ಪೇಡಾ ಸವಿಯಲು ಸಿದ್ಧ.  


ಇದರಲ್ಲಿ ಇನ್ನಷ್ಟು ಓದಿ :