ಬೆಂಗಳೂರು: ಸಮುದ್ರದಲ್ಲಿ ಸಿಗುವ ಮೀನುಗಳಲ್ಲಿ ಸೀಗಡಿ ಕೂಡ ಒಂದು. ಇದು ಎಲ್ಲರೂ ಇಷ್ಟಪಡುವಂತಹ, ರುಚಿಕರವಾದ ಮಾಂಸಹಾರ. ಸೀಗಡಿಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಸೀಗಡಿ ಹಾಕಿ ಮಾಡಿದ ಎಲ್ಲಾ ಅಡುಗೆಯು ರುಚಿಕರವಾಗಿಯೇ ಇರುತ್ತದೆ. ಇದರಲ್ಲಿ ಸೀಗಡಿ ಸಾರು ಮಾಡುವುದು ಹೇಗೆಂದು ನೋಡೋಣ. ಸೀಗಡಿ ಸಾರು ಮಾಡಲು ಬೇಕಾಗುವ ಸಾಮಾಗ್ರಿಗಳು : ಚೆನ್ನಾಗಿ ತೊಳೆದಿಟ್ಟುಕೊಂಡ ಸೀಗಡಿ ಮೀನು 200 ಗ್ರಾಂ, ಬೆಳ್ಳುಳ್ಳಿ 12 ಎಸಳು, ತೆಂಗಿನಹಾಲು 1 ಕಪ್, ಅಚ್ಚಕಾರದ ಪುಡಿ