ಬೆಂಗಳೂರು : ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟವಾದ ಆರೋಗ್ಯಕರವಾದ ಸಿಹಿತಿಂಡಿ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : ಅಕ್ಕಿ, ಅರಿಶಿನ, ಬೆಲ್ಲ, ಶೇಂಗಾ ಎಣ್ಣೆ, ತೊಡದೇವು ಎರೆಯುವ ಮಡಿಕೆ, ಅಡಿಕೆ ಹಾಳೆಯ ತುಂಡು. ಮಾಡುವ ವಿಧಾನ : ರಾತ್ರಿ ನೆನೆಸಿಟ್ಟ ಅಕ್ಕಿಯನ್ನು ಬೆಳಿಗ್ಗೆ ಮಿಕ್ಸಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಅದಕ್ಕೆ ಮುಕ್ಕಾಲು ಭಾಗದಷ್ಟು ಅಕ್ಕಿ ಹಿಟ್ಟು , ಸ್ವಲ್ಪ ಅರಿಶಿನ ಹಾಕಿ ದೋಸೆ ಹಿಟ್ಟಿನಂತೆ ಕಲಸಿಕೊಳ್ಳಿ.