ನುಚ್ಚಿನುಂಡೆ ಹಬೆಯಲ್ಲಿ ಬೇಯಿಸಿ ಮಾಡುವ ಕರ್ನಾಟಕದ ಜನಪ್ರಿಯವಾದ ತಿಂಡಿಯಾಗಿದೆ. ಬೇಕಾಗುವ ಸಾಮಾಗ್ರಿಗಳು: ತೊಗರಿಬೇಳೆ - 1 ಪಾವು ಹಸಿಮೆಣಸಿನಕಾಯಿ – 7-8 ಹಸಿಕೊಬ್ಬರಿ – 1 ಬಟ್ಟಲು ಕೊತ್ತಂಬರಿ ಸೊಪ್ಪು ಇಂಗು – ಅರ್ಧ ಟೀಸ್ಪೂನ್ ಜೀರಿಗೆ – ಚಮಚ ಮಾಡುವ ವಿಧಾನ: ಮೊದಲಿಗೆ ತೊಗರಿಬೇಳೆಯನ್ನು 5-6 ಗಂಟೆಗಳ ಕಾಲ ನೆನೆಹಾಕಿ. ನಂತರ ಅದನ್ನು ನೀರಿನಿಂದ ಬಸಿದುಕೊಂಡು, ಅದಕ್ಕೆ ಹಸಿಮೆಣಸಿನ ಕಾಯಿ ಸೇರಿಸೊಂಡು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಿ.