ಬೆಂಗಳೂರು: ನಿಂಬೆ ಹಣ್ಣು ಬೇಗನೇ ಬಾಡಿ ಹೋಗುತ್ತದೆ. ಇದನ್ನು ಫ್ರೆಶ್ ಆಗಿ ಇಡಲು ಕೆಲವು ಉಪಾಯ ಮಾಡಿ ನೋಡಬಹುದು. ನಿಂಬೆ ಹಣ್ಣನ್ನು ತೊಳೆದ ಮೇಲೆ ಏರ್ ಟೈಟ್ ಕವರ್ ನಲ್ಲಿ ಹಾಕಿಡಿ. ಇದರಿಂದ ಅದು ಬೇಗನೇ ಬಾಡುವುದಿಲ್ಲ ಮತ್ತು ವಾಸನೆ ಕಳೆದುಕೊಳ್ಳುವುದಿಲ್ಲ.ಕತ್ತರಿಸಿ ಉಳಿದ ನಿಂಬೆ ಹಣ್ಣನ್ನು ಒಂದ ತಟ್ಟೆಯಲ್ಲಿ ತಲೆಕೆಳಗಾಗಿ ಇಟ್ಟು ಅದನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಡಿ.ನಿಂಬೆ ರಸವನ್ನು ಸಂಗ್ರಹಿಸಿಡುವುದಿದ್ದರೆ ಗಾಜಿನ ಪಾತ್ರೆಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ.