ಸ್ವಾದಿಷ್ಠ ತ್ರಿವರ್ಣ ಬರ್ಫಿ

ಬೆಂಗಳೂರು, ಗುರುವಾರ, 28 ಮಾರ್ಚ್ 2019 (17:53 IST)

ಬೇಕಾಗುವ ಸಾಮಗ್ರಿಗಳು: 
1. ಹಾಲು – 1/4 ಲೀಟರ್
2. ಹಾಲಿನ ಪೌಡರ್ – 1/4 ಕೆಜಿ
3. ತುಪ್ಪ – 3-4 ಚಮಚ
4. ಸಕ್ಕರೆ – 1/4 ಕಪ್
5. ಪಿಸ್ತಾ
6. ಕೊಬ್ಬರಿ ತುರಿ
7. ಕೇಸರಿ – ಚಿಟಿಕೆ
 
ಮಾಡುವ ವಿಧಾನ: 
ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ಹಾಲು ಹಾಕಿ ಕುದಿಸಿ, ಅದಕ್ಕೆ 3 ಚಮಚ ತುಪ್ಪ ಸೇರಿಸಿರಿ. ಬಳಿಕ ಅದಕ್ಕೆ ಹಾಲಿನ ಪೌಡರ್ ಹಾಕಿ ಗಂಟು ಕಟ್ಟದಂತೆ ತಿರುಗಿಸಿ. ಹಾಲು – ತುಪ್ಪದೊಂದಿಗೆ ಪೌಡರ್ ಮಿಕ್ಸ್ ಆಗುವ ತನಕ ಕೈ ಬಿಡದೆ ತಿರುಗಿಸಿ. ನಂತರ ಸಕ್ಕರೆ ಸೇರಿಸಿ ತಳ ಬಿಡುವ ತನಕ ಕುದಿಸಿರಿ. (ಸೌಟಿನಿಂದ ತಿರುಗಿಸಿ). ಎಲ್ಲಾ ಮಿಶ್ರಣ ಗಟ್ಟಿಯಾದ ಬಳಿಕ ಕೆಳಗಿಳಿಸಿರಿ. ಬಳಿಕ ಗಟ್ಟಿಯಾದ ಮಿಶ್ರಣವನ್ನು ಮೂರು ಭಾಗ ಮಾಡಿ ಒಂದು ಸಣ್ಣ ಬೌಲ್‍ಗೆ ಹಾಕಿರಿ.

ಒಂದು ಭಾಗಕ್ಕೆ ಹಾಲಿನೊಂದಿಗೆ ಸೇರಿಸಿದ ಕೇಸರಿ ಸೇರಿಸಿ ಮಿಕ್ಸ್ ಮಾಡಿ – ಕೇಸರಿ ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಸಿಪ್ಪೆ ತೆಗೆದು ಬೇಯಿಸಿ ರುಬ್ಬಿದ ಪಿಸ್ತಾವನ್ನು ಮಿಕ್ಸ್ ಮಾಡಿ – ಹಸಿರು ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಬಿಳಿ ಕೊಬ್ಬರಿ ತುರಿಯ ಪೇಸ್ಟ್ ಅನ್ನು ಮಿಕ್ಸ್ ಮಾಡಿ – ಬಿಳಿ ಬಣ್ಣವಾಗುತ್ತದೆ.  ಈಗ ಒಂದು ತಟ್ಟೆಗೆ ತುಪ್ಪ ಸವರಿ. ಕೇಸರಿ, ಬಿಳಿ, ಹಸಿರು ಬಣ್ಣದ ಮಿಶ್ರಣವನ್ನು ಒಂದರ ಮೇಲೊಂದರಂತೆ ಹಾಕಿ. ಬೇಕಾದ ಆಕೃತಿಗೆ ಕಟ್ ಮಾಡಿ. ತಣ್ಣಗಾದ ಮೇಲೆ ತಟ್ಟೆಯಿಂದ ತೆಗೆದು ಸೇವಿಸಿರಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸ್ವಾದಿಷ್ಠ ತೇಂಗೊಳಲು

ಅಕ್ಕಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದು, ಸೋಸಿ, ಒಣ ಬಟ್ಟೆಯ ನೆರಳಿನಲ್ಲಿ ಪೂರ್ತಿ ಒಣಗಿಸಿಡಿ.

news

ಬಿಸಿಲಿನ ಬೇಗೆ ತಣಿಸುವ ತಂಪು ತಂಪಾದ ಹಣ್ಣಿನ ಜ್ಯೂಸ್‌ಗಳು

ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಕು ಎಂದೆನಿಸದೇ ಇರುವ ಕಾಲವದು. ದೇಹವು ...

news

ಮೊದಲನೆಯ ರಾತ್ರಿ ಅದ್ಭುತ ರೊಮ್ಯಾನ್ಸ್ ಮಾಡಲು ಏನು ಮಾಡಬೇಕು?

ಬೆಂಗಳೂರು: ಮೊದಲನೆಯ ರಾತ್ರಿ ಎನ್ನುವ ಪದ ಎಲ್ಲಾ ವಿವಾಹಿತ ಜೋಡಿಗಳ ಮೈ ರೋಮಾಂಚನಗೊಳಿಸುವ ರಾತ್ರಿ. ಆದರೆ ಆ ...

news

ಮುಟ್ಟಿನ ಸಮಯದಲ್ಲಿ ಗುಪ್ತಾಂಗದಲ್ಲಿ ವಿಪರೀತ ನೋವು ಉಪಶಮನಕ್ಕೆ ಹೀಗೆ ಮಾಡಿ

ಬೆಂಗಳೂರು: ಮುಟ್ಟಿನ ಸಮಯದಲ್ಲಿ ಕೈ ಕಾಲು ಸೆಳೆತ, ಹೊಟ್ಟೆ ನೋವು ಇತ್ಯಾದಿ ಸ್ತ್ರೀಯರಲ್ಲಿ ಕಂಡುಬರುವುದು ...