ವೆಗಾನ್ ಆಹಾರ ಪದ್ಧತಿ ಇತ್ತೀಚೆಗೆ ಅಮೇರಿಕಾದಲ್ಲಿ ಬಹಳ ಪ್ರಚಲಿತದಲ್ಲಿದೆ. ಇದು ಸಸ್ಯ ಜನ್ಯ ಆಹಾರ ಪದ್ಧತಿಯನ್ನು ಆಧಾರವಾಗಿಟ್ಟುಕೊಂಡು ಬಂದ ಆಹಾರ ಪದ್ಧತಿಯಾಗಿದೆ. ಇದನ್ನು ಅನುಸರಿಸುವವರು ಪ್ರಾಣಿಜನ್ಯ ಆಹಾರಗಳಾದ ಹಾಲು, ಮೊಸರು, ಮಾಂಸ, ಮೊಟ್ಟೆ ಮುಂತಾದವುಗಳನ್ನು ಸೇವಿಸದೇ ಬರಿಯ ಸಸ್ಯಜನ್ಯ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದು ಅನಾರೋಗ್ಯಗಳಿಂದ ದೂರವಿರಲು ಮತ್ತು ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಸಹಕಾರಿ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಇತ್ತೀಚೆಗೆ ಕ್ರಿಕೆಟ್, ಫುಟ್ಬಾಲ್ ಆಟಗಾರರೂ ಸಹ