ಸಪೋಟ ಹಣ್ಣನ್ನು ಇಷ್ಟಪಡದಿರುವವರು ಯಾರೂ ಇಲ್ಲ. ಇದರಲ್ಲಿ ಅನೇಕ ವಿಧವಾದ ಗುಣಗಳು ಅಡಗಿ ಕೊಂಡಿವೆ. ಯಾವಾಗಲಾದರೂ ಆಯಾಸವಾಗಿರುವಾಗ ಒಂದು ಸಪೋಟ ಹಣ್ಣನ್ನು ತಿಂದು ನೋಡಿ, ಕೆಲವು ನಿಮಿಷಗಳಲ್ಲಿಯೆ ಆಯಾಸ ಸ್ವಲ್ಪ ಕಡಿಮೆಯಾಗುತ್ತದೆ. ಇದರಲ್ಲಿ ಪ್ರಕ್ಟೋಜ್, ಸುಕ್ರೋಜ್, ಸಕ್ಕರೆ ಅಂಶ ಸಮೃದ್ದಿಯಾಗಿರುವುದೆ ಕಾರಣ. ರಕ್ತಹೀನತೆಯಿಂದ ಬಳಲುತ್ತಿರುವವರು ಸಪೋಟವನ್ನು ತಿನ್ನುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಸಪೋಟದಲ್ಲಿರುವ ಆರೋಗ್ಯ ಪ್ರಯೋಜನಗಳೇನೆಂದು ನೋಡೋಣ. 1. ಸಪೋಟ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೃಷ್ಟಿ ದೋಷಗಳು ಸಹ ದೂರವಾಗುತ್ತದೆ.