ಸಂಪತ್ತು ಮತ್ತು ಸೌಂದರ್ಯಕ್ಕಾಗಿ ಪ್ರಖ್ಯಾತಿ ಪಡೆದಿದೆ ಅಹಮದಾಬಾದಿನಲ್ಲಿರುವ ಶ್ರೀ ಜಗನ್ನಾಥ ದೇವಾಲಯ. ಇದು ನಗರದ ಜಮಲ್ಪುರ ಪ್ರದೇಶದಲ್ಲಿದ್ದು, ಅಹಮದಾಬಾದ್ ಪಟ್ಟಣದ ವೈಭವದ ಸಂಕೇತವೂ ಆಗಿದೆ. ಸುಮಾರು 150 ವರ್ಷಗಳ ಹಿಂದೆ ಈ ದೇವಳದ ನಿರ್ಮಾಣವಾಯಿತು. ಇಲ್ಲಿನ ಸಂತ ನರಸಿಂಗದಾಸಜಿ ಎಂಬವರ ಕನಸಿನಲ್ಲಿ ಕಾಣಿಸಿಕೊಂಡ ಜಗನ್ನಾಥ ದೇವನು, ತನ್ನ ಸಹೋದರ ಬಲದೇವ ಮತ್ತು ಸಹೋದರಿ ಸುಭದ್ರೆ ಸಹಿತವಾಗಿ ತನಗೊಂದು ಆಲಯ ಕಟ್ಟಿಸುವಂತೆ ಕೋರಿಕೊಂಡನು ಎಂಬ ಪ್ರತೀತಿ ಇದೆ. ಈ ಕನಸಿನ