ಮಂಗಳೂರಿನಿಂದ 20 ಕಿಮೀ ದೂರವಿರುವ ಕಟೀಲಿನ ಜನಪ್ರಿಯ ದುರ್ಗಾಪರಮೇಶ್ವರಿ ದೇವಾಲಯವು ನಂದಿನಿ ನದಿಯ ಮಧ್ಯದಲ್ಲಿ ನೆಲೆಗೊಂಡಿದೆ. ಕಟೀಲು ಹೆಸರು ಎರಡು ಪದಗಳಿಂದ ಜನ್ಯವಾಗಿದೆ. ಕಟಿ ಎಂದರೆ ನಡು(ಸೊಂಟ), ಇಳೆ ಎಂದರೆ ಭೂಮಿ. ಕಟೀಲ್ ಎಂದರೆ ಭೂಮಿಯ ನಡುವಿನ ಪ್ರದೇಶವೆಂದು ಅರ್ಥ.