ಶ್ರವಣಬೆಳಗೊಳ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಜೈನ ಯಾತ್ರಾಸ್ಥಳವಾಗಿದೆ. ಪಟ್ಟಣದ ಮಧ್ಯದಲ್ಲಿರುವ ಕೊಳದಿಂದ ಈ ಪ್ರದೇಶಕ್ಕೆ ಹೆಸರು ಬಂದಿದೆ.(ಬೆಳ-ಕೊಳ ಅಂದರೆ ಬಿಳಿಯ ಕೊಳ). ಶ್ರವಣಬೆಳಗೊಳ ಬಾಹುಬಲಿ ಪ್ರತಿಮೆಗೆ ಪ್ರಖ್ಯಾತವಾಗಿದ್ದು, ಜಗತ್ತಿನಲ್ಲಿ ಅತೀ ಎತ್ತರದ ಶಿಲೆಯ ಪ್ರತಿಮೆ ಎಂದು ಹೆಸರು ಪಡೆದಿದೆ. 58 ಅಡಿ ಎತ್ತರದ ಈ ಮೂರ್ತಿಯನ್ನು ಗ್ರಾನೈಟ್ನ ಏಕಶಿಲೆಯಿಂದ ಕೆತ್ತಲಾಗಿದೆ. 3347 ಅಡಿ ಎತ್ತರದ ಬೆಟ್ಟದ ಮೇಲೆ ಗೋಮಟೇಶ್ವರ ಮಂದಿರವನ್ನು ನಿರ್ಮಿಸಲಾಗಿದೆ.ಈ ಬೆಟ್ಟವನ್ನು ವಿಂದ್ಯಾಗಿರಿ ಎಂದು ಕರೆಯಲಾಗುತ್ತದೆ. ಬೆಟ್ಟದ