ಇಂದು ನಾಡಿನಾದ್ಯಂತ ಜನರು ಗೌರಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಗೌರಿ ಹಬ್ಬಕ್ಕೆ ವಿಶೇಷ ಸ್ಥಾನವಿದ್ದು, ಗೌರಿ ಇಂದು ಭೂಮಿಗೆ ಬರುತ್ತಾಳೆ ಎಂಬ ನಂಬಿಕೆಯಿದ್ದು ,ಗೌರಿಯನ್ನು ಭೂಮಿಯಲ್ಲಿ ಸ್ವಾಗತಿಸಲು ಗಣೇಶ ಬರುತ್ತಾನೆಂಬ ಪ್ರತೀತಿಯಿದೆ.ಉತ್ತರಾಂಚಲದಲ್ಲಿರುವ ಗೌರಿಕುಂಡ ವಿಶೇಷ ಸ್ಥಾನಮಾನ ಗಳಿಸಿದೆ. ಗೌರಿಕುಂಡದಲ್ಲಿರುವ ಬಿಸಿನೀರಿನ ಬುಗ್ಗೆ ವಿಶೇಷ ಮಹತ್ವ ಪಡೆದಿದೆ. ಈ ಬಿಸಿನೀರಿನ ಬುಗ್ಗೆಯಲ್ಲಿ ಗೌರಿ ಸ್ನಾನ ಮಾಡುವಾಗ ಗಣೇಶನನ್ನು ಸ್ನಾನದ ಕೋಣೆಯ ಹೊರಗೆ ನಿಲ್ಲಿಸಿದ್ದಳು. ಶಿವನು ಬಂದಾಗ ಗಣೇಶ ಶಿವನನ್ನು ಒಳಕ್ಕೆ ಬಿಡದೇ ತಡೆಯುತ್ತಾನೆ