800 ವರ್ಷಗಳಷ್ಟು ಪ್ರಾಚೀನವಾದ ಗುಡ್ಡಟ್ಟು ವಿನಾಯಕ ಮಂದಿರವು ರಾಷ್ಟ್ರೀಯ ಹೆದ್ದಾರಿ 66ರಿಂದ 10 ಕಿಮೀ ದೂರವಿದ್ದು ಮಂಗಳೂರು ಪಟ್ಟಣದಿಂದ 90 ಕಿಮೀ ದೂರವಿದೆ. ಮಲಗಿದ ಆನೆಯಂತೆ ಕಾಣುವ ಬೃಹತ್ ಗ್ರಾನೈಟ್ ಕಲ್ಲಿನ ಕೆಳಗಿರುವ ವಿನಾಯಕನ ಮುಖ್ಯ ಮೂರ್ತಿಯು ತಾನೇತಾನಾಗಿ ಉದ್ಭವಿಸಿದೆಯೆಂದು ನಂಬಲಾಗಿದೆ.