ಈ ಬಾರಿಯ ಧಾರ್ಮಿಕ ಯಾತ್ರೆಯಲ್ಲಿ ನಾವು ನಿಮ್ಮನ್ನು ಕರೆದೊಯ್ಯಲಿರುವುದು ಮಹಾರಾಷ್ಟ್ರದಲ್ಲಿರುವ ಜೆಜುರಿಯ ಖಂಡೋಬಾ ಮಂದಿರಕ್ಕೆ. ಮರಾಠಿಯಲ್ಲಿ ಈ ಮಂದಿರವನ್ನು ಕರೆಯುವುದು ಖಂಡೋಬಾಚಿ ಜೆಜುರಿ ಎಂಬುದಾಗಿ. ಜೆಜುರಿಯ ದೇವರು ಮ್ಹಾಲ್ಸಕಾಂತ್ ಅಥವಾ ಮಲ್ಹಾರಿ ಮಾರ್ತಾಂಡ. ಮ್ಹಾಲ್ಸಕಾಂತ್ ಮಹಾರಾಷ್ಟ್ರದ ಅತ್ಯಂತ ಪುರಾತನವಾದ ಬುಡಕಟ್ಟು ಜನಾಂಗವಾದ ಢಂಗಾರ್ಗಳ ಅಧಿದೇವತೆ. ಮರಾಠಾ ಸಂಪ್ರದಾಯದ ಪ್ರಕಾರ, ಹೊಸದಾಗಿ ವಿವಾಹವಾದ ದಂಪತಿಗಳು ಈ ಮಂದಿರಕ್ಕೆ ಭೇಟಿ ನೀಡುವುದು ಕಡ್ಡಾಯ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫಲ್ತಾನ್ ಎಂಬ ಪಟ್ಟಣದ