ಮೈಸೂರಿನಿಂದ 135 ಕಿಮೀ ದೂರದಲ್ಲಿ, ಹೋಗೇನಕಲ್ನಿಂದ 98ಕಿಮೀ ದೂರದಲ್ಲಿರುವ ಮತ್ತು ಬೆಂಗಳೂರಿನಿಂದ 209 ಕಿಮೀ ದೂರವಿರುವ ಮಲೆ ಮಹದೇಶ್ವರ ಬೆಟ್ಟವು ಚಾಮರಾಜನಾಗರದ ಕೊಳ್ಳೆಗಾಲದ ಪೂರ್ವಭಾಗದಲ್ಲಿರುವ ಪವಿತ್ರ ಯಾತ್ರಾ ಸ್ಥಳ. ಸುಮಾರು 3000 ಅಡಿ ಎತ್ತರದಲ್ಲಿ ಇದು ನೆಲೆಗೊಂಡಿದೆ. ಮಲೆ ಮಹದೇಶ್ವರ ಬೆಟ್ಟ ಸುತ್ತಲೂ ದಟ್ಟವಾದ ಕಾಡುಗಳಿಂದ ಆವರಿಸಿದ್ದು, ಮಹದೇಶ್ವರನಿಗೆ ಮುಡಿಪಾದ ಮಲೈ ಮಹದೇಶ್ವರ ದೇವಾಲಯಕ್ಕೆ ಹೆಸರಾಗಿದೆ. ಪ್ರಾಚೀನ ಮತ್ತು ಪವಿತ್ರ ಮಲೆ ಮಹದೇಶ್ವರ ಅತ್ಯಂತ ಜನಪ್ರಿಯ ಶೈವ ಯಾತ್ರಾಸ್ಥಳವಾಗಿದೆ.