ದೇವರೆಂದರೆ ಪ್ರತಿಯೊಬ್ಬರಿಗೂ ಭಯ, ಭಕ್ತಿ ಇದ್ದೇ ಇರುತ್ತದೆ. ಅನೇಕ ಮಂದಿ ಬೆಳಿಗ್ಗೆ ಎದ್ದರೆ ದೇವರಿಗೆ ನಮಸ್ಕಾರ ಮಾಡುವ ಮೂಲಕ, ದೇವಸ್ಥಾನಗಳಿಗೆ ದರ್ಶನ ನೀಡುವ ಮೂಲಕ ದೇವರಿಗೆ ಸಂಪೂರ್ಣ ಶರಣಾಗುತ್ತಾರೆ. ಲೌಕಿಕ ಜಗತ್ತಿನಲ್ಲಿರುವ ನಾವು ಅಲೌಕಿಕ ಶಕ್ತಿಯನ್ನು ಪೂಜಿಸುವುದಕ್ಕೆ ನಿಜವಾಗಲೂ ಕಾರಣವೇನು? ದೇವರನ್ನು ನೋಡಿದವರು ಇದುವರೆಗೂ ಯಾರೂ ಇಲ್ಲ. ದೇವರ ಅಸ್ತಿತ್ವವನ್ನು ಸಾರಿ ಹೇಳಿದವರು ಯಾರೂ ಇಲ್ಲ. ಆದರೂ ದೇವರೆಂಬ ಆ ಅವ್ಯಕ್ತ ಮೂರ್ತಿಗೆ ನಾವು ವಂದಿಸುತ್ತೇವೆ.ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತೇವೆ.