ಭೀಕಾ ಶರ್ಮಾ ಈ ಬಾರಿಯ ನಮ್ಮ ಧಾರ್ಮಿಕ ಯಾತ್ರೆ ಗುಜರಾತ್ನ ವಡೋದರದಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ. ಸಯಾಜಿ ರಾವ್ ಗಾಯಕ್ವಾಡ್ ಆಡಳಿತಾವಧಿಯಲ್ಲಿ ಸುಮಾರು 120 ವರ್ಷಗಳ ಹಿಂದೆ ಈ ಐತಿಹಾಸಿಕ ಮಂದಿರವನ್ನು ನಿರ್ಮಿಸಲಾಯಿತು. ಕಾಲಾನಂತರದಲ್ಲಿ, ಈ ಮಂದಿರವನ್ನು ಸ್ವಾಮಿ ವಲ್ಲಭ ರಾವ್ಜಿಗೆ ಹಸ್ತಾಂತರಿಸಲಾಯಿತು. ಅವರ ಬಳಿಕ ಸ್ವಾಮಿ ಚಿದಾನಂದ ಸರಸ್ವತಿಯವರ ಅಧೀನಕ್ಕೆ ಬಂದ ಈ ಮಂದಿರವನ್ನು ಅವರು 1948ರಲ್ಲಿ ಜೀರ್ಣೋದ್ಧಾರ ಮಾಡಿದರು. ಅವರು ದೈವಾಧೀನರಾದನಂತರ ಮಂದಿರವನ್ನು