ಕ್ರಿ.ಶ. 1336ರ ಏಪ್ರಿಲ್ 18 ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಕನ್ನಡ ಸಾಮ್ರಾಜ್ಯ ವಿಜಯನಗರ ಸ್ಥಾಪನೆಯಾಗಿದ್ದು, ಇತಿಹಾಸ ಮರೆಯಲಾಗದ ಒಂದು ಸುದಿನ. ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹಕ್ಕ -ಬುಕ್ಕರು ಕಟ್ಟಿದ ವಿಜಯನಗರ ಎಂಬ ಪುಟ್ಟ ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ದೊಡ್ಡ ಸಾಮ್ರಾಜ್ಯವಾಗಿ ಮೆರೆಯಿತು. ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ವಿಜಯನಗರ ಸಾಮ್ರಾಜ್ಯ ಹಬ್ಬಿತ್ತು. ಸುಮಾರು 500 ವರ್ಷಗಳ ಹಿಂದೆ ಮುತ್ತು ರತ್ನ, ವಜ್ರ, ವಜ್ರವೈಢೂರ್ಯಗಳನ್ನು ರಸ್ತೆಬದಿಯಲ್ಲಿ ಹಾಕಿ ಮಾರುತ್ತಿದ್ದ ಈ ಸಾಮ್ರಾಜ್ಯ ಕರ್ನಾಟಕದ ನಾಗರಿಕತೆಯನ್ನು, ಶ್ರೀಮಂತಿಕೆಯನ್ನು,