ಹೈದರಾಬಾದ್ ಕರ್ನಾಟಕದಾದ್ಯಂತ ಎಳ್ಳಾಮಾವಾಸ್ಯೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಹೊಲಗಳಲ್ಲಿ ಬೆಳೆದ ವಿವಿಧ ಧಾನ್ಯ, ತರಕಾರಿ ಮಿಶ್ರಣದ ಭಜಿ, ಜೋಳದ ಕಡುಬು ಸಿದ್ಧಪಡಿಸಿದ ರೈತ ಸಮುದಾಯ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ಗೌರವ ಸಮರ್ಪಿಸಿದ್ರು. ಹೆಣ್ಣು ಗರ್ಭಿಣಿಯಿದ್ದಾಗ ಹೇಗೆ ವಿವಿಧ ತಿಂಡಿಗಳನ್ನು ಸಿದ್ಧಪಡಿಸಿ ಶಿಮಂತ ಕಾರ್ಯಕ್ರಮ ಮಾಡಲಾಗುತ್ತದೆಯೋ ಹಾಗೆಯೇ ವೈವಿಧ್ಯಮಯ ಭಕ್ಷ್ಯಗಳನ್ನು ಫಲ ಹೊತ್ತು ನಿಂತ ಭೂ ತಾಯಿಗೆ ಸಮರ್ಪಿಸಲಾಯಿತು. ಹೊಲದಲ್ಲಿಯೇ ವೈವಿಧ್ಯಯಮ ಭಕ್ಷ್ಯಗಳನ್ನು ಸಿದ್ಧಪಡಿಸಿ ಸಹಪಂಕ್ತಿಯಲ್ಲಿ ಕುಳಿತು ಸವಿಯಲಾಯಿತು.