ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ಮೈಸೂರಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚೆಲುವಿನ ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ. ಅಟ್ಟದ ಮೇಲಿರುವ, ಡಬ್ಬಾಗಳಲ್ಲಿ ಅಡಗಿಕೊಂಡಿರುವ, ಅಂಗಡಿಗಳ ಷೋಕೇಸಿನಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಮೈದಳೆಯುತ್ತವೆ. ಪುಟಿದೆದ್ದ ಚಿನ್ನದಂತೆ ಚಿಣ್ಣರ ಕಣ್ಗಳ ಕನಸಿನ ಕೂಸಾಗಿ ಉಪ್ಪರಿಗೆ ಏರಿ ಮಾಯಾಲೋಕವನ್ನೇ ಸೃಷ್ಟಿ ಮಾಡುತ್ತವೆ. ಈ ಲೋಕದಲ್ಲಿ ಬೊಂಬೆಗಳಿಗ್ಯಾವ ಭೇದವಿಲ್ಲ. ಕಿನ್ನರ