ದಸರಾ ಪ್ರಚಾರಾರ್ಥವಾಗಿ ಮತ್ತು ಮತ್ತು ನಗರದ ಆರ್ಥಿಕತೆ ಹೆಚ್ಚಿಸಲು ದುಬೈ ಶಾಪಿಂಗ್ ಫೆಸ್ಟಿವಲ್ ಮಾದರಿಯಲ್ಲಿ ಮೀಡಿಯಾಟ್ರಿ ಸಂಸ್ಥೆ ಮೈಸೂರು ಶಾಪಿಂಗ್ ಫೆಸ್ಟಿವಲ್ ನಡೆಸಲು ಮುಂದಾಗಿದೆ. ದಸರಾದಿಂದ ಆರಂಭವಾಗಿ ದೀಪಾವಳಿಯವರೆಗೆ ಈ ಮಾರಾಟದ ಉತ್ಸವ ನಡೆಯಲಿದೆ. ಸಂಘಟಕ ಸಂಸ್ಥೆ ಮೀಡಿಯಾಟ್ರಿ ಪ್ರಕಾರ, ಉತ್ಸವವನ್ನು ನಗರದಾದ್ಯಂತ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದ್ದು ವ್ಯಾಪಾರ ಕೇಂದ್ರ ಪ್ರದೇಶಗಳಲ್ಲಿ 1,000ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುವುದು. ಸೆಪ್ಟೆಂಬರ್ 24 ರಿಂದ ನವೆಂಬರ್ 5ರ ವರೆಗೆ ನಡೆಯುವ ಈ 43