ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವುದು ಅಮೆರಿಕಾದಲ್ಲಿ ಇತ್ತೀಚೆಗೆ ಚರ್ಚೆಯ ವಸ್ತುವಾಗಿತ್ತು. ಭಾರತವು ಬಹು ಧರ್ಮಗಳ ದೇಶವಾಗಿದ್ದು ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಶ್ರೇಷ್ಟ ಧರ್ಮವೆಂದು ಭಾವಿಸುತ್ತಾರೆ. ಹಿಂದೂ ಧರ್ಮದಷ್ಟು ಶ್ರೇಷ್ಟ ಧರ್ಮವಿಲ್ಲವೆಂದು ಹಿಂದೂಗಳು ಭಾವಿಸುತ್ತಾರೆ. ಮುಸ್ಲಿಮರು ತಮ್ಮ ಧರ್ಮವೇ ಶ್ರೇಷ್ಟವೆಂದು ಕಾಯಾ, ವಾಚಾ ಮನಸಾ ಅವರ ದೇವರನ್ನು ಪ್ರಾರ್ಥಿಸುತ್ತಾರೆ. ಕ್ರೈಸ್ತರು ಕೂಡ ಏಸುಕ್ರಿಸ್ತನ ಪ್ರಾರ್ಥನೆ ಮಾಡುತ್ತಾರೆ. ಆದರೆ ಅವರವರ ಧಾರ್ಮಿಕ ಆಚರಣೆಗೆ ಯಾರೂ ಅಡ್ಡಿ, ಆತಂಕಗಳನ್ನು ಉಂಟುಮಾಡದೇ ನಿರಾತಂಕವಾಗಿ ಇರುವುದೇ ಧಾರ್ಮಿಕ ಸಹಿಷ್ಣುತೆ.