ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಕುಮಾರಿಯರನ್ನು ದೇವಿ ಸ್ವರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಲ್ಲದೇ ಈ ಪೂಜೆ ಅಪೂರ್ಣವಾಗುತ್ತದೆ ಎಂದು ಕಥೆಗಳು ಹೇಳುತ್ತವೆ. ಕುಮಾರಿಯರ ಮಹಾನವಮಿ ಪೂಜೆಯಿಂದ ಮಾತ್ರ ಸಾಧನೆ ಸಿದ್ದಿಸುತ್ತದೆ. ಎರಡು ವರ್ಷದ ವಯಸ್ಸಿನ ಬಾಲಕಿಯರಿಗೆ ಕುಮಾರಿ, ಎರಡು ವರ್ಷಕ್ಕಿಂತ ಹೆಚ್ಚು ಮೂರು ವರ್ಷದೊಳಗಿನ ಬಾಲಕಿಯರನ್ನು ತ್ರಿಮೂರ್ತಿ, ಮೂರು ವರ್ಷಕ್ಕಿಂತ ಹೆಚ್ಚು ನಾಲ್ಕು ವರ್ಷದೊಳಗಿನ ಬಾಲಕಿಯರನ್ನು ಕಲ್ಯಾಣಿ, ನಾಲ್ಕು ವರ್ಷಕ್ಕಿಂತ ಹೆಚ್ಚು ಐದು ವರ್ಷದೊಳಗಿನ ಬಾಲಕಿಯರನ್ನು ರೋಹಿಣಿ, ಐದು