ಗೋವು ಪ್ರೀತಿಯಿಂದ ಕೊಡುವ ಹಾಲನ್ನು ಕುಡಿದು ಸಂಭ್ರಮಿಸಿ, ಭಾರತೀಯ ಗೋವಂಶದ ಮಹತ್ವವನ್ನು ಸಾರುವ ಅಭಯಾಕ್ಷರ - ಹಾಲುಹಬ್ಬ ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರಮಠದ ಕಾಮದುಘಾ ವಿಭಾಗದಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತಿದ್ದು, ನಾಳೆ (15/07/2017) ಪದ್ಮನಾಭನಗರದ ಅಟಲ್ ಬಿಹಾರಿ ಪಾಜಪೇಯಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.00 ಯಿಂದ ನಡೆಯಲಿದೆ. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಪದ್ಮನಾಭನಗರ ಶಾಸಕರಾದ ಆರ್ ಅಶೋಕ್ ಉಪಸ್ಥಿತರಿರಲಿದ್ದಾರೆ. ಎ.ಪಿ.ಎಸ್ ಕಾಲಿಜಿನ ನಿವೃತ್ತ