ಕಾಂಗರೂಗಳ ಸೊಕ್ಕು ಮುರಿದು ಮೆರೆದ ಭಾರತ

ಭುವನ್ ಪುದುವೆಟ್ಟು
2008ರ ವರ್ಷ ಭಾರತಕ್ಕೆ ಕ್ರೀಡೆಯಲ್ಲಿ ಸುಗ್ಗಿಯೆಂದೇ ಹೇಳಬಹುದು. ಅದು ಕ್ರಿಕೆಟ್ ಅಥವಾ ಇನ್ನ್ಯಾವುದೇ ಕ್ರೀಡೆಯಾಗಿರಬಹುದು. ಪಡೆದ ಬಹುಮಾನಗಳಿಗೆ ಗಿಟ್ಟಿಸಿದ ಹೆಗ್ಗಳಿಕೆಗಳಿ ಅಗಣ್ಯ - ರಾಷ್ಟ್ರೀಯ ಕ್ರೀಡೆ ಹಾಕಿಯೊಂದನ್ನು ಹೊರತುಪಡಿಸಿ.

ಕ್ರಿಕೆಟಿನಲ್ಲಿ ದಿಗ್ಗಜ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸಿ, ಇಂಗ್ಲೆಂಡಿಗೆ ವರ್ಷಾಂತ್ಯ ಕಹಿ ನೆನಪುಗಳನ್ನು ಉಣಬಡಿಸಿ ನಂಬರ್ ವನ್ ಸ್ಥಾನದತ್ತ ಹೆಜ್ಜೆ, ಸಚಿನ್‌ ಲಾರಾ ದಾಖಲೆಯನ್ನು ಮೀರಿಸಿದ್ದು, ಐಪಿಎಲ್ ಟ್ವೆಂಟಿ-20 ಪಂದ್ಯಗಳು ಹುಚ್ಚೆಬ್ಬಿಸಿದ್ದು ಪ್ರಮುಖ ಉತ್ತಮ ಬೆಳವಣಿಗೆಗಳು. ಅನಿಲ್ ಕುಂಬ್ಳೆ ಮತ್ತು ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು, ಹರಭಜನ್-ಸೈಮಂಡ್ಸ್ ಮಂಗನಾಟ ವಿವಾದ, ಸಚಿನ್ ಬಗ್ಗೆ ಹೇಡನ್ ಹೇಳಿಕೆಗಳು, ಸೆಹ್ವಾಗ್-ಮುನಾಫ್, ಗಂಭೀರ್-ವಾಟ್ಸನ್ ವಿವಾದ ಮುಂತಾದುವು ಕಹಿ ನೆನಪುಗಳನ್ನು ಕೊಟ್ಟವುಗಳು. ವರ್ಷವಿಡೀ ಕಂಡು-ಕೇಳಿ-ಬಿಟ್ಟವುಗಳ ಬಗ್ಗೆ ಒಂದು ಸುತ್ತಿನ ಪಕ್ಷಿನೋಟ ಇಲ್ಲಿದೆ.

PTI

ಸೌರವ್ ಗಂಗೂಲಿ ಬಾಯ್ ಬಾಯ್...
ಭಾರತೀಯ ಕ್ರಿಕೆಟ್ ತಂಡ ಕಂಡ ಧೀಮಂತ ನಾಯಕ ಎಂಬ ಬಿರುದು ಇವರಿಂದ ಯಾವತ್ತೂ ಅಳಿಸಿ ಹೋಗದಷ್ಟು ಅಚ್ಚುಗಳನ್ನು ಕ್ರೀಸಿನಲ್ಲೇ ಗಂಗೂಲಿ ಉಳಿಸಿ ಹೋಗಿದ್ದಾರೆ. ಇವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡದ್ದು ಆಸ್ಟ್ರೇಲಿಯಾದೆದುರು 2008ರ ನವೆಂಬರ್ 6ರಂದು. 36ರ ಹರೆಯದ ಗಂಗೂಲಿ ಒಟ್ಟು 113 ಟೆಸ್ಟ್ ಆಡಿದ್ದು 7,212 ರನ್ ದಾಖಲಿಸಿದ್ದಾರೆ. 16 ಶತಕ, 35 ಅರ್ಧ ಶತಕ ಇವರ ಹೆಸರಿನಲ್ಲಿದೆ. 311 ಏಕದಿನ ಪಂದ್ಯಗಳಲ್ಲಿ 22 ಶತಕ ಹಾಗೂ 72 ಅರ್ಧ ಶತಕ ಇವರು ದಾಖಲಿಸಿದ್ದರು.

ಅನಿಲ್ ಕುಂಬ್ಳೆ ನಿವೃತ್ತಿ...
ಅಭಿಮಾನಿ ಗೆಳೆಯರಿಂದ ಜಂಬೋ ಎಂದೇ ಕರೆಸಲ್ಪಡುತ್ತಿದ್ದ ಅಚ್ಚ ಕನ್ನಡಿಗ ಸ್ವಚ್ಛ ಕ್ರಿಕೆಟಿಗ ಅನಿಲ್ ಕುಂಬ್ಳೆ. ಟೀಮ್ ಇಂಡಿಯಾದಲ್ಲಿ ಬೌಲರ್ ಹಾಗೂ ಕಪ್ತಾನನಾಗಿ ಪ್ರಮುಖ ಪಾತ್ರ ವಹಿಸಿದ್ದವರು. ಸ್ಪಿನ್ ಬೌಲಿಂಗ್‌ನಲ್ಲಿ ಇವರಷ್ಟು ಮೆರೆದವರು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾರೂ ಇಲ್ಲ. ಮ‌ೂಲತಃ ಕಾಸರಗೋಡು ತಾಲೂಕಿನವರಾದ ಇವರು ಒಟ್ಟು 132 ಟೆಸ್ಟ್ ಹಾಗೂ 271 ಏಕದಿನಗಳಲ್ಲಿ ಆಡಿದ್ದರು. ಟೆಸ್ಟ್‌ನಲ್ಲಿ 619 ವಿಕೆಟ್ ಕೀಳುವ ಮ‌ೂಲಕ ಅತಿ ಹೆಚ್ಚು ವಿಕೆಟ್ ಕಿತ್ತವರ ಸಾಲಿನಲ್ಲಿ ಮ‌ೂರನೇ ಸ್ಥಾನ ಇವರದ್ದು. ಏಕದಿನದಲ್ಲಿ 337 ವಿಕೆಟ್ ಪಡೆದಿದ್ದರು.
PTI

ಆಡಂ ಗಿಲ್‌ಕ್ರಿಸ್ಟ್ ನಿವೃತ್ತಿ...
37ರ ಹರೆಯದ ಆಸೀಸ್ ಕ್ರಿಕೆಟಿಗ 2008ರ ಜನವರಿ 26ರಂದು ತಾನು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಘೋಷಿಸಿದರು. ಅವರು ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದು ಭಾರತದ ವಿರುದ್ಧ 2008ರ ಮಾರ್ಚ್ ನಾಲ್ಕರಂದು. ಒಟ್ಟು 287 ಏಕದಿನ ಪಂದ್ಯಗಳನ್ನಾಡಿರುವ ಇವರು 9619 ರನ್ ಕಲೆ ಹಾಕಿದ್ದರು. ಗರಿಷ್ಠ 172 ರನ್, 16 ಶತಕ ಇತರಲ್ಲಿ ಸೇರಿತ್ತು. ಅದೇ ರೀತಿ 96 ಟೆಸ್ಟ್ ಆಡಿದ್ದ ಇವರು 5570 ರನ್ ಪೇರಿಸಿದ್ದರು. ಅದರಲ್ಲಿ ಅಜೇಯ 204 ಗರಿಷ್ಠ ರನ್ ಹಾಗೂ 17 ಶತಕ ದಾಖಲಿಸಿದ್ದರು. ತನ್ನ ಬ್ಯಾಟಿಂಗ್ ಸರಾಸರಿಯನ್ನು 40ರ ಆಸುಪಾಸಿನಲ್ಲಿ ಕೊಂಡೊಯ್ದದ್ದು ಅವರ ವಿಶೇಷತೆ.

ಸ್ಟೀಫನ್ ಫ್ಲೆಮಿಂಗ್ ಮುಕ್ತಾಯ...
ನ್ಯೂಜಿಲ್ಯಾಂಡಿನ ಈ ಖ್ಯಾತ ಕ್ರಿಕೆಟಿಗ 2008ರಲ್ಲಿ ನಿವೃತ್ತಿಯಾದ ಪ್ರಮುಖರಲ್ಲಿ ಒಬ್ಬರು. ಹಲವು ವರ್ಷಗಳ ಕಾಲ ತಂಡದ ನಾಯಕತ್ವ ವಹಿಸಿ ಯಶಸ್ವಿಯಾಗಿದ್ದ ಇವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು ಇಂಗ್ಲೆಂಡ್ ಎದುರು 2008ರ ಮಾರ್ಚ್ 22ರಂದು. 111 ಟೆಸ್ಟ್ ಹಾಗೂ 280 ಏಕದಿನ ಪಂದ್ಯಗಳನ್ನಾಡಿರುವ ಇವರು ಕ್ರಮವಾಗಿ 9 ಹಾಗೂ 8 ಶತಕಗಳನ್ನು ಕೂಡ ಸಿಡಿಸಿದ್ದರು. ಬ್ಯಾಟಿಂಗ್ ಸರಾಸರಿ 35ರ ಆಸುಪಾಸಿನಲ್ಲಿತ್ತು. ಅತಿ ಹೆಚ್ಚು ಅಂದರೆ 218 ಏಕದಿನ ಪಂದ್ಯಗಳಲ್ಲಿ ಕಪ್ತಾನನಾಗಿದ್ದ ದಾಖಲೆ ಇವರ ಹೆಸರಿನಲ್ಲಿದೆ.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...